ಚಡಚಣ: ಸಮೀಪದ ಸಂಗಮೇಶ್ವರ ಮಹಾವಿದ್ಯಾಲಯದಲ್ಲಿ
ಡಿಸೆಂಬರ್ ೨೨ ರಂದು ರಾಷ್ಟ್ರೀಯ ಗಣಿತ ದಿನ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಳಕಿಯ ಪ್ರಥಮ ದರ್ಜೆ ಕಾಲೇಜಿನ ಗಣಿತದ ಪ್ರಾಧ್ಯಾಪಕರಾದ ಮಂಜುನಾಥ ಕುಂಬಾರ ಮಾತನಾಡಿ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವ ಹುಟ್ಟುಹಬ್ಬದ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ
ರಾಮಾನುಜನ್ ಬದುಕಿದ್ದು ಕೇವಲ 32 ವಷ೯ಗಳು. ಆದರೆ ಅವರ ಸಾಧನೆ ಈ ಜಗತ್ತಿನಲ್ಲಿ ಮನುಕುಲವಿರುವವರೆಗೂ ಶಾಶ್ವತವಾಗಿರುತ್ತದೆ. ಇ೦ದು ನಾವು ಬದುಕುತ್ತಿರುವ ಡಿಜಿಟಲ್ ತ೦ತ್ರಜ್ಞಾನಕ್ಕೆ ಅವರ ಕೊಡುಗೆ ಅಪಾರ. ಇ೦ದಿನ ಎಷ್ಟೋವೈಜ್ಞಾನಿಕ ಆವಿಷ್ಕಾರಗಳಿಗೆ ಅವರು ರೂಪಿಸಿದ ಗಣಿತದ ಸೂತ್ರಗಳೇ ಕಾರಣ ಎಂದರು.
ಮಾಹವಿದ್ಯಾಲಯದ ಗಣಿತದ ಪ್ರಾಧ್ಯಾಪಕಿಯಾದ ಅಶ್ವೀನಿ ಹಿರೇಮಠ ಮಾತನಾಡಿ ಭಾರತದ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಗಣಿತ ದಿನ’ ಎಂದು ಆಚರಣೆ ಮಾಡಲಾಗುತ್ತದೆ. 2012 ರಿಂದ ಡಿಸೆಂಬರ್ 22 ಅನ್ನು ರಾಷ್ಟ್ರೀಯ ಗಣಿತ ದಿನ (National Mathematics Day) ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಡಿಸೆಂಬರ್ 22 ಅನ್ನು ರಾಷ್ಟ್ರೀಯ ಗಣಿತ ದಿನವಾಗಿ ಆಚರಿಸಲು 2012 ರಲ್ಲಿ ಆಗಿನ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ಕರೆಕೊಟ್ಟರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಡಾ. ಎಸ್.ಬಿ.ರಾಠೋಡ ಮಾತನಾಡಿ ವಿಶ್ವ ಗಣಿತಕ್ಕೆ ಭಾರತದ ಕೊಡುಗೆ ಅಪಾರ. ಸೊನ್ನೆ ಯನ್ನು ಪ್ರಪಂಚಕ್ಕೆ ನೀಡಿದ ಭಾರತ ಗಣಿತದ ಗಣಿ ಶ್ರೀನಿವಾಸ ರಾಮಾನುಜನ್ ರನ್ನು ಕೂಡ ಕೊಟ್ಟಿದೆ. ಅವರ ಕೊಡುಗೆ ಅಪಾರವಾಗಿದೆ, ಇವತ್ತಿನ ದಿವಸ ಅವರನ್ನು ನೆನಪು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ತಮ್ಮ ಕಲಾ ಪ್ರದರ್ಶನ ನೀಡುವದರ ಮೂಲಕ ಈ ಕಾರ್ಯಕ್ರಮದ ಕೇಂದ್ರ ಬಿಂದು ಆದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ ಶ್ರೀ ಎಂ.ಕೆ.ಬಿರಾದಾರ ಇದ್ದರು, ಬಿ.ಎಸ್ಸಿ ಸಂಚಾಲಕರಾದ ದಿವ್ಯಾಶ್ರೀ ಬೋಗಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಪ್ರೊ. ಅಣ್ಣಾರಾಯ ಪಾಟೀಲ ವಂದಿಸಿದರು.