ರೈತರ ದಶಕಗಳ ಕನಸಿನ ತಿಮ್ಮಾಪೂರ ಏತ ನೀರಾವರಿ ಯೋಜನೆಗೆ ಸಿ.ಎಂ.ಸಿದ್ದರಾಮಯ್ಯ ಚಾಲನೆ
ಸಮರ್ಥವಾಣಿ ವಾರ್ತೆ
ಸಿಂಧನೂರು ಡಿ.29: ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿದ್ದರೂ ಉಪಕಾಲುವೆಯ ನೀರು ಸಮರ್ಪಕವಾಗಿ ಜಮೀನುಗಳಿಗೆ ಹರಿಯದ ಕಾರಣ ತೊಂದರೆ ಅನುಭವಿಸುತ್ತಿದ್ದ ೨೪ಕ್ಕೂ ಹೆಚ್ಚು ಗ್ರಾಮಗಳ ರೈತರ ಎರಡು ದಶಕಗಳ ಕನಸು ನನಸಾಗಿದೆ. ಸುಮಾರು ೪೦ ಸಾವಿರ ಎಕರೆ ರೈತರ ಜಮೀನುಗಳಿಗೆ ನೀರಾವರಿ ಸೌಕರ್ಯ ಒದಗಿಸುವ ತಿಮ್ಮಾಪುರ ಏತ ನೀರಾವರಿ ಯೋಜನೆ ಲೋಕಾರ್ಪಣೆಗೆ ಡಿ.೩೦ ರಂದು ಸಿ.ಎಂ.ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದು ರೈತರು ಅತ್ಯಂತ ಸಂತಸದಲ್ಲಿದ್ದಾರೆ.
ವಾರ್ಷಿಕ ಮಳೆ ಪ್ರಮಾಣ ಕುಸಿತ, ತುಂಗಭದ್ರಾ ಅಣೆಕಟ್ಟೆಯಿಂದ ಸಾಕ? ನೀರಿನ ಲಭ್ಯತೆಯ ಕೊರತೆಯ ಕಾರಣದಿಂದಾಗಿ ತಾಲ್ಲೂಕು ವ್ಯಾಪ್ತಿಯ ಈ ಭಾಗದ ರೈತರ ಜಮೀನುಗಳಿಗೆ ನೀರಿನ ಅಭಾವ ಎದುರಾಗಿತ್ತು. ಇದರಿಂದಾಗಿ ಪ್ರತಿವ?ವೂ ರೈತರು ಬೆಳೆನ? ಅನುಭವಿಸುತ್ತಿದ್ದರು. ತುಂಗಭದ್ರಾ ನದಿ ಪಕ್ಕದಲ್ಲಿದ್ದರೂ ಭತ್ತ ಸೇರಿ ತೋಟಗಾರಿಕೆ ಬೆಳೆ ಬೆಳೆಯಲು ಆಗದೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದ ರೈತರು ಸರ್ಕಾರಕ್ಕೆ ಏತ ನೀರಾವರಿ ಯೋಜನೆಗೆ ಬೇಡಿಕೆಯಿಟ್ಟಿದ್ದರು. ಅಂದಿನ ಶಾಸಕ ಹಂಪನಗೌಡ ಬಾದರ್ಲಿ ಅವರು ಈ ಯೋಜನೆ ಜಾರಿಗೊಳಿಸಲು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರು. ಈ ಹಿಂದೆ ೨೦೧೮ರಲ್ಲಿ ಸಿಎಂ ಆಗಿದ್ದಾಗ ಈ ಯೋಜನೆಗೆ ಚಾಲನೆ ನೀಡಿದ್ದ ಸಿದ್ದರಾಮಯ್ಯ ಅವರೇ ಲೋಕಾರ್ಪಣೆಗೆ ಆಗಮಿಸುತ್ತಿರುವುದು ವಿಶೇ?ವಾಗಿದೆ.
ಫೆ. ೧೮, ೨೦೧೮ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದರು. ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಎಚ್.ಎಮ್.ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಮಾರ್ಚ್ ೮, ೨೦೧೯ ರಲ್ಲಿ ಓಸಿಯನ್ ಕನ್ಷಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇವರಿಗೆ ಗುತ್ತಿಗೆ ಕೆಲಸ ನೀಡಲಾಗಿತ್ತು. ರೂ.೯೦.೦೬ ಕೋಟಿ ರೂಪಾಯಿ ವೆಚ್ಚದಲ್ಲಿ, ೩೪,೯೪೮ ಎಕರೆಗೆ ೯೦ ಕ್ಯೂಸೆಕ್ ನೀರೊದಗಿಸಲು ೧೮ ತಿಂಗಳ ಕಾಲಾವಧಿಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ನಿಗದಿಪಡಿಸಲಾಗಿತ್ತು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.
ಪಂಪ್‌ಹೌಸ್, ಜಾಕ್‌ವೆಲ್, ನೀರಿನ ಘಟಕ, ಟ್ರಾನ್ಸ್ಫಾರ್ಮರ್ ಅಳವಡಿಕೆಯ ಕೆಲಸ ಪೂರ್ಣಗೊಂಡಿದೆ. ಏರ್ ವೆಜಿಲ್ ಟ್ಯಾಂಕ್ ಕಾಮಗಾರಿ, ವಿದ್ಯುತ್ ಸರಬರಾಜು ತಂತಿ ಎಳೆಯುವ ಕೆಲಸ ನಡೆದಿದ್ದು ಎರಡು ದಿನದಲ್ಲಿ ಮುಗಿಯಲಿದೆ. ಯೋಜನೆಯ ಸಮೀಪದ ಗಿಣಿವಾರ ಗ್ರಾಮದಲ್ಲಿ ವಿದ್ಯುತ್ ಉಪ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪಂಪ್‌ಹೌಸ್ ಮತ್ತು ಇತರ ಸಲಕರಣೆಗಳಿಗಾಗಿ ನಿರ್ಮಿಸಿರುವ ಕಟ್ಟಡಕ್ಕೆ ಬಣ್ಣ ಹಚ್ಚುವ ಕೆಲಸ ಭಾಗಶಃ ಮುಗಿದಿದೆ. ೨೦೧೯ರಲ್ಲಿ ಕಾಮಗಾರಿಗೆ ಆದೇಶ ಪಡೆಯಲಾಗಿತ್ತು, ಆದರೆ ಕೋವಿಡ್‌ನಿಂದಾಗಿ ಕೆಲಸ ಸ್ಥಗಿತಗೊಂಡಿದ್ದರಿಂದ ಯೋಜನೆ ವಿಳಂಬವಾಗಲು ಕಾರಣವಾಗಿದೆ ಎಂದು ಗುತ್ತಿಗೆದಾರ ?ರ್ಫುದ್ದೀನ್ ಅಲಿ ಹೇಳುತ್ತಾರೆ.