ಗಂಗಾವತಿ.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಮಂಗಳವಾರ ಸಂಜೆ ೬ ಗಂಟೆ ಸುಮಾರಿಗೆ ನಗರದ ಆನೆಗೊಂದಿ ರಸ್ತೆಯಲ್ಲಿನ ಪಿಎಲ್‌ಡಿ ಬ್ಯಾಂಕ್ ಮುಂದೆ ಘಟನೆ ನಡೆದಿದೆ. ಬ್ಯಾಂಕಿನ ಕಚೇರಿ ಕಾರ್ಯ ಮುಗಿಸಿಕೊಂಡು ದೊಡ್ಡಪ್ಪ ದೇಸಾಯಿ ಮನೆಗೆ ಹೊರಡಲು ಬ್ಯಾಂಕಿನ ಮುಂದೆ ನಿಲ್ಲಿಸಿದ್ದ ತಮ್ಮ ಕಾರ್ ಹತ್ತಲು ಹೊರಟ ಸಂದರ್ಭದಲ್ಲಿ ಏಕಾ ಏಕಿ ವ್ಯಕ್ತಿಯೊರ್ವ ಬಂದು ಕಟ್ಟಿಗೆಯಿಂದ ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಕ್ಷಣಾರ್ಧದಲ್ಲಿ ವ್ಯಕ್ತಿ ತಲೆಗೆ ಕಟ್ಟಿಗೆಯಿಂದ ಹೊಡೆದು ಮುಂದೆ ನಿಲ್ಲಿಸಿದ್ದ ಕಾರ್‌ನಲ್ಲಿ ಪರಾರಿಯಾದ ಎಂದು ಹಲ್ಲೆಗೊಳಗಾದ ದೊಡ್ಡಪ್ಪ ದೇಸಾಯಿ ತಿಳಿಸಿದ್ದಾರೆ. ದೊಡ್ಡಪ್ಪ ದೇಸಾಯಿಗೆ ಸ್ವಲ್ಪ ಪ್ರಮಾಣದ ತಲೆಗೆ ಪೆಟ್ಟಾಗಿದ್ದು, ಯಾವುದೇ ರೀತಿಯ ತೊಂದರೆಯಾಗಿಲ್ಲ.
ಹಲ್ಲೆ ಮಾಡಿದ ವ್ಯಕ್ತಿಯ ಮೋಬೈಲ್ ಘಟನೆ ಸ್ಥಳದಲ್ಲಿ ಬಿದ್ದಿದ್ದು, ಹಲ್ಲೆಕೊನ್ನು ಪತ್ತೆ ಹಚ್ಚಲು ಅನುಕೂಲವಾಗಲಿದೆ. ವಿಷಯ ತಿಳಿದು ಬ್ಯಾಂಕಿಗೆ ಪೊಲೀಸ್ ಸಿಬ್ಬಂದಿ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳು ಮತ್ತು ದೇಸಾಯಿ ಆಪ್ತರು ಆಗಮಿಸಿದ್ದು, ಪೊಲೀಸ್‌ರಿಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಹಲ್ಲೆ ಕೊರರನನ್ನು ಪತ್ತೆ ಹಚ್ಚಲು ಪರಿಶೀಲನೆ ನಡೆಸಲಾಗುತ್ತಿದೆ.
