ಗಂಗಾವತಿ.
ಹೈದರಾಬಾದ್‌ನಿಂದ ಬೆಳಗಾವಿಗೆ ಹೊರಟಿದ್ದ ಎಸ್‌ಆರ್‌ಎಸ್ ಕಂಪನಿಯ ಖಾಸಗಿ ಐಷಾರಾಮಿ ಬಸ್ ತಾಲೂಕಿನ ಕೊಪ್ಪಳ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದು, ಪ್ರಯಾಣಿಕರಿಗೆ ಗಾಯಗೊಂಡಿದ್ದು, ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುರುವಾರ ಬೆಳಗಿನ ಜಾವ ೬.೦೦ ಗಂಟೆ ಸಮಯಕ್ಕೆ ಕೊಪ್ಪಳ ರಸ್ತೆಯ ಹೆಚ್.ಜಿ.ರಾಮುಲು ನಗರದ ಹತ್ತಿರ ಘಟನೆ ನಡೆದಿದೆ. ಹೈದರಾಬಾದ್‌ನಿಂದ ಬೆಳಗಾವಿಗೆ ಹೊರಟಿದ್ದ ಬಸ್‌ನ ಎದುರಿಗೆ ಬೂಲೇರೋ ವಾಹನ ಬಂದಿದೆ. ಈ ವಾಹನ ಅಪಘಾತಕ್ಕಿಡಾಗುವುದನ್ನು ತಪ್ಪಿಸಲು ಹೊಗಿದ್ದು, ಚಾಲಕನ ನಿಯಂತ್ರ ತಪ್ಪಿ ಬಸ್ ಪಲ್ಟಿಯಾಗಿ ಬಿದ್ದಿದೆ. ಬಸ್‌ನಲ್ಲಿ ೨೬ ಜನ ಪ್ರಯಾಣಿಕರಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರನ್ನು ಬಸ್‌ನಿಂದ ಹೊರಗೆ ಬರುವಂತೆ ಮಾಡಿದ್ದಾರೆ. ವಿಷಯ ತಿಳಿದ ತಕ್ಷಣ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿ ಗಾಯಾಳುಗಳನ್ನು ಗಂಗಾವತಿ ಮತ್ತು ಕೊಪ್ಪಳದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಗ್ರಾಮೀಣ ಠಾಣೆ ಪಿಐ ವಾಸುಕುಮಾರ ಮಾತನಾಡಿದ್ದು, ಹೈದರಾಬಾದ್‌ನಿಂದ ಬೆಳಗಾವಿಗೆ ಹೊರಟಿದ್ದ ಬಸ್ ಎದುರಿಗೆ ಬರುವ ವಾಹನದಿಂದ ಡಿಕ್ಕಿಯಾಗುತ್ತಿರುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ೨೭ ಜನ ಪ್ರಯಾಣಿಕರಲ್ಲಿ ೧೦ ಜನರಿಗೆ ಗಂಭೀರ ಗಾಯಗಳಾವಿದೆ. ಗಾಯಾಳುಗಳನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಮರ್ಥವಾಣಿಗೆ ಮಾಹಿತಿ ನೀಡಿದ್ದಾರೆ.
