ಗಂಗಾವತಿ.
ಜೈ ಶ್ರೀರಾಮ ಎಂದು ಘೋಷಣೆ ಕೂಗಿದ ಯುವಕನ ಮೇಲೆ ಮುಸ್ಲಿಂ ಯವಕರ ಗುಂಪು ಹಲ್ಲೆ ಮಾಡಿರುವ ಘಟನೆ ಗಂಗಾವತಿ ತಾಲೂಕಿನ ಶ್ರೀರಾಮನಗರ ಪಟ್ಟಣದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಶ್ರೀರಾಮನಗರದಲ್ಲು ಘಟನೆ ನಡೆದಿದೆ.
ಹಲ್ಲೆಯಲ್ಲಿ ಗಾಯಗೊಂಡಿರುವ ಯುವಕ ಕುಮಾರ್ ರಾಠೋಡ ಚಿಕಿತ್ಸೆ ಪಡೆಯುತ್ತಿದ್ದಾನೆ. ಬುದವಾರ ಬೆಳೆಗ್ಗೆ ಆಙSP ಪಾಟೀಲ್ ಆಸ್ಪತ್ರೆಗೆ ಆಗಮಿಸಿ ಹಲ್ಲೆಗೊಳಗಾದ ಯುವಕನನ್ನು ವಿಚಾರಣೆ ನಡೆಸಿರು. ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮಣ ನಾಯಕ ಮತ್ತಿತರ ಮುಖಂಡರು ಆಸ್ಪತ್ರೆಗೆ ಆಗಮಿಸಿ ಯುವನಿಗೆ ಧೈರ್ಯ ಹೇಳಿದರಲ್ಲದೆ ಘಟನೆಯನ್ನು ಖಂಡಿಸಿದ್ದು, ತಕ್ಷಣ ಪೊಲೀಸರು ಹಲ್ಲೆ ಮಾಡಿರುವ ಯುವಕರ ವಿರುದ್ದ ಕಾನೂನ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು.
ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಘಟನೆ ಖಂಡಿಸಿ ಬುಧವಾರ ಗಂಗಾವತಿ ಬಂದ್ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ ಹಿಂದು ಮತ್ತು ಮುಸ್ಲಿಂ ಯುವಕರ ನಡುವೆ ಉಂಟಾಗಿರುವ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಘಟನೆಯ ಹಿನ್ನೆಲೆಯಲ್ಲಿ ಗಂಗಾವತಿಯ ಸೂಕ್ಷ್ಮತೆಯನ್ನು ಅರಿತ ಎಸ್‌ಪಿ ಯಶೋಧಾ ವಂಟಗೊಡಿ ಗಂಗಾವತಿಯಲ್ಲೇ ಬಿಡು ಬಿಟ್ಟಿದ್ಧಾರೆ. ವಳ್ಳಾರಿ ವಲಯದ ಐಜಿ ಲೊಕೇಶಕುಮಾರ ಕೂಡಾ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗಂಗಾವತಿಗೆ ಆಗಮಿಸಲಿದ್ದು, ಶ್ರೀರಾಮನಗರದದ ಘಟನೆಗೆ ಸಂಬಂಧಿಸಿದಂತೆ ಹಲ್ಲೆ ಮಾಡಿರುವರ ಯುವಕರ ಪೈಕೆ ಕೆಲವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರತಿಭಟನೆ ಮತ್ತು ಘಟನೆಯನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಗಂಗಾವತಿಯಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!