ಹರಪನಹಳ್ಳಿ.
ಪಟ್ಟಣದ ಹೊರ ಹೊಲಯದಲ್ಲಿ ಕಳೆದ ಮೇ. ರಂದು ದರೋಡೆ ನಡೆದಿದ್ದು, ಗಂಗಾವತಿಯ ವಿಜಯ ಅಣ್ವೇಕರ ಎಂಬ ಬಂಗಾರ ಅಂಗಡಿ ಮಾಲೀಕನಿಗೆ ಸಂಬಂಧಿಸಿದ ರೂ.೪೦ ಲಕ್ಷ ಹಣ, ಎರಡು ಮೋಬೈಲ್ ಸುಲಿಗೆ ಮಾಡಿ ಕಾರನ್ನು ತೆಗೆದುಕೊಂಡು ಪರಾರಿಯಾಗಿರುವ ಪ್ರಕರಣದಲ್ಲಿ ಗಂಗಾವತಿಯ ರವಿ ಲಿಂಗರಾಜ್ ಕ್ಯಾಂಪ್ ಮತ್ತು ಸುನಿಲ್ ಎಂಬ ಇರ್ವರು ಆರೋಪಿಗಳನ್ನು ಬಂಧಿಸಿರುವ ಹರಪನಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಳೆದ ಮೇ,೧೫ ರಂದು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೇ.18 ರಂದು  ಪ್ರಕರಣ ದಾಖಲಾಗಿದ್ದು, ರಾಬರಿ ನಡೆದ ಎಂಟು ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಹರಪನಹಳ್ಳಿ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಳೆದ ಮೇ.೧೫ ರಂದು ಗಂಗಾವತಿ ನಗರದ ವಿಜಯನಗರ ಕಾಲೋನಿಯ ವಿಜಯ ಅಣ್ವೇಕರ್ ಎಂಬ ಬಂಗಾರ ವ್ಯಾಪಾರಿಯು ತಮ್ಮ ಸಂಬಂಧಿ ಸುನಿಲ್ ರಾಯ್ಕರ್ ಮತ್ತು ಮಹೇಶ ಮಡಿವಾಳ ಅವರೊಂದಿಗೆ ಗೋಲ್ಡ್ ಟೆಸ್ಟಿಂಗ್ ಮಸೀನ್ ದುರಸ್ತಿ ಮಾಡಿಸಿಕೊಂಡ ಬರಲು ಕಾರಿನಲ್ಲಿ ಹೊರಟಿದ್ದಾರೆ. ಮಾರ್ಗ ಮಧ್ಯೆ ಬೆಣ್ಣೆಹಳ್ಳಿ ಗ್ರಾಮದ ಹತ್ತಿರ ಕಾರನ್ನು ಆರೋಪಿಗಳು ಹಿಂಬಾಲಿಸಿದ್ದಾರೆ. ನಂತರ ಹಂಚಿಕೇರಿ ಮಾರ್ಗವಾಗಿ ದಾವಣೆಗೆರೆಗೆ ಹೊರಟಾಗ ರಾತ್ರಿ ೧ ಗಂಟೆ ಸುಮಾರಿಗೆ ಹರಪನಹಳ್ಳಿ ಸಬ್ ಜೈಲ್ ಹತ್ತಿರ ಆರೋಪಿಗಳು ಕಾರನ್ನು ತಡೆದು ನಿಲ್ಲಿಸಿ ಕಾರ್ ಚಾಲನೆ ಮಾಡುತ್ತಿದ್ದ ಸುನಿಲ್ ರಾಯ್ಕರ್ ಮತ್ತು ಮಹೇಶ ಅವರಿಗೆ ಹಲ್ಲೆ ಮಾಡಿ ಅವರ ಬಳಿ ಇದ್ದ ರೂ.೪೦ ಲಕ್ಷ ನಗದು ಮತ್ತು ಎರಡು ಮೋಬೈಲ್ ವಶಪಡಿಸಿಕೊಂಡು ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ನಂತರ ಸುನಿಲ್ ಮತ್ತು ಮಹೇಶ ಅವರು ಬಂದು ಗಂಗಾವತಿಯ ತಮ್ಮ ಬಂಗಾರ ಅಂಗಡಿ ಮಾಲೀಕನಿಗೆ ವಿಷಯ ತಿಳಿಸಿ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ರಾಬರಿ ಆಗಿರುವ ಕುರಿತು ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಹರಪನಹಳ್ಳಿ ಪೊಲೀಸ್‌ರು ಡಿವೈಎಸ್‌ಪಿ ವೆಂಕಟಪ್ಪ ನಾಯಕ ಮಾರ್ಗದರ್ಶನದಲ್ಲಿ ಪಿಐ ಸಾಬಯ್ಯ ಮತ್ತಿತರ ಪೊಲೀಸ್ ತಂಡ ಪ್ರಕರಣ ಜಾಲ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಕಳೆದ ದಿನ ಪ್ರಕರಣದಲ್ಲಿ ರಾಬರಿ ನಡೆಸಿದ್ದರೆನ್ನಲಾದ ಗಂಗಾವತಿ ನಗರದ ಲಿಂಗರಾಜಕ್ಯಾಂಪಿನ ರವಿ ಮತ್ತು ಸುನಿಲ್ ಎಂಬ ಇರ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ಮತ್ತು ಮುಂದಿನ ತನಿಖೆ ನಡೆಸಲು ಮತ್ತು ರಾಬರಿಯಲ್ಲಿ ಪಾಲ್ಗೊಂಡಿರುವ ಇನ್ನಿತರ ಆರೋಪಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಆರೋಪಿಗಳಾದ ರವಿ ಮತ್ತು ಸುನಿಲ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಹರಪನಹಳ್ಳಿ ಪೊಲೀಸ್ ಠಾಣೆ ಪಿಐ ಸಾಬಯ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!