ಕೊಪ್ಪಳ.
ದೇಶದ ಮೂಲೆ ಮೂಲೆಯಲ್ಲಿ ನಡೆಯುವ ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಗೆಲುವಿಗೆ ತಂತ್ರಗಾರಿಕೆ ಹೆಣೆದು ಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಮತ್ತು ರಾಷ್ಟ್ರೀಯ ಚುನಾವಣೆ ವಿಶ್ಷೇಷಣಕಾರ ಪ್ರಶಾಂತ ಕಿಶೋರ ಈಗ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದು, ಪಕ್ಷದಲ್ಲಿ ಅವರಿಗೆ ರಾಷ್ಟ್ರೀಯ ಮುಖ್ಯ ವಕ್ತಾರ ( ಚೀಪ್ ಸ್ಪೋಕ್ಸ್ ಪರ್ಸನ್ ಹುದ್ದೆ ನೀಡಿ ದೇಶದ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದೆ.
ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ ನಡ್ಡಾ ಆದೇಶದಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅರುಣಸಿಂಗ್ ನೇಮಕ ಮಾಡಿದ್ದಾರೆ. ಕಳೆದ ೨೦೧೪ರಲ್ಲಿ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಬಿಜೆಪಿ ನಿಚ್ಚಲ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಹಿಡಿಯಲಿದೆ ಎಂದು ವಿಶ್ಷೇಣೆ ಮಾಡಿದ್ದ ಪ್ರಶಾಂತ ಕಿಶೋರ ನಂತರ ದೇಹಲಿಯ ಆಮ್ ಆದ್ಮೀ ಪಕ್ಷಕ್ಕೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು. ಮತ್ತು ಕಳೆದ ೨೦೧೯ರ ನಂತರ ಕಾಂಗ್ರೆಸ್ ಪಕ್ಷದಲ್ಲಿ ಹಲವು ದಿನಗಳ ಕಾಲ ಚುನಾವಣಾ ತಂತ್ರಗಾರಿಕೆ ಹೆಣಿದುಕೊಡುತ್ತಿದ್ದ ಕಿಶೋರ ರಾಹುಲ್‌ಗಾಂಧಿ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದಿದ್ದರು. ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಅವರು ಪ್ರತ್ಯೇಕವಾಗಿ ಬಿಜೆಪಿ, ಕಾಂಗ್ರೆಸ್ ಮತ್ತಿತರ ಪಕ್ಷಗಳು ಪಡೆಯುವ ಅಂಕಿ ಅಂಶಗಳ ಕುರಿತು ವಿಶ್ಷೇಣೆ ಮಾಡುತ್ತಿದ್ದರು. ಮತ್ತು ಇತ್ತೀಚಿUಷ್ಟೆ ರಾಷ್ಟ್ರೀಯ ಟಿವಿ ಮಾಧ್ಯಮಗಳಿಗೆ ಸಂದರ್ಶನ ನೀಡಿ, ಪ್ರಧಾನಿ ಮೋದಿ ವಿರುದ್ಧ ಬಲವಾಗಿ ಸೆಣುವ ವಿರೋಧ ಪಕ್ಷ ಇಲ್ಲ. ರಾಹುಲ್‌ಗಾಂಧಿಗೆ ಮೋದಿ ಅವರನ್ನು ಎದುರಿಸುವಷ್ಟು ರಾಜಕೀಯ ಅನುಭವ ಇಲ್ಲ. ೪೦೦ ಗುರಿಯೊಂದಿಗೆ ಪ್ರಧಾನಿ ಮೋದಿ ಈ ಚುನಾವಣೆ ಎದುರಿಸುತ್ತಿದ್ದು, ಮೋದಿ ದೇಶದ ಮೂಲೆ ಮೂಲೆಯಲ್ಲಿ ಜನರ ಮೆಚ್ಚುಗೆ ಗಳಿಸುತ್ತಿದ್ದಾರೆ. ಮೋದಿ ಬಿಟ್ಟರೆ ಇತರೆ ಪಕ್ಷಗಳಲ್ಲಿ ಪ್ರಬಲ ನಾಯಕರಿಲ್ಲ ಎಂಬ ಅಭಿಪ್ರಾಯ ಇರುವುದರಿಂದ ದೇಶದ ಜನತೆ ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಅವರು ಪ್ರಧಾನಿಯಾಗುವುದು ನಿಶ್ಚಿತ ಎಂದು ವಿಶ್ಷೇಣೆ ಮಾಡಿದ್ದರು. ಇದು ಕಾಂಗ್ರೆಸ್ ಮತ್ತು ವಿರೋಧಿ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ದಿಡೀರ್ ಇಂದು ಬಿಜೆಪಿಯ ರಾಷ್ಟ್ರೀಯ ಮುಖ್ಯ ವಕ್ತಾರರಾಗಿ ನೇಮಕವಾಗಿರುವುದು ದೇಶದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ ಎಂದು ಹೇಳಬಹುದಾಗಿದೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!