ಗಂಗಾವತಿ.
ಇಂದು ನಗರದ ಈದ್ಗಾ ಮೈದಾನದಲ್ಲಿ ನಡೆಯುವ ಮುಸ್ಲಿಂ ಸಮಾಜದ ಪವಿತ್ರ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ನಾನು ಇರಲ್ಲ. ನನ್ನ ವೈಯಕ್ತಿಕ ಕಾರಣದಿಂದ ಕಳೆದ ಹದಿನೈದು ದಿನಗಳಿಂದ ನಾನು ಬೆಂಗಳೂರಿನಲ್ಲಿ ವಾಸ್ತವ್ಯ ಇರುವುದರಿಂದ ಗಂಗಾವತಿಯಲ್ಲಿ ಹಬ್ಬ ಆಚರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯಾವುದೇ ವ್ಯಕ್ತಿಗಳ ಹೇಳಿಕೆಗಳಿಗೆ ಕಿವಿಗೊಡದೇ ಶಾಂತಿಯುತವಾಗಿ ಹಬ್ಬ ಆಚರಿಸಿ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಆಡಿಯೋ ಮೂಲಕ ತಮ್ಮ ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ.
ಬಕ್ರೀದ್ ಹಬ್ಬದ ಶಾಂತಿಸಭೆಯಲ್ಲಿ ನಡೆದ ಎರಡು ಗುಂಪುಗಳ ನಡುವ ಉಂಟಾಗಿದ್ದು, ಶಾಸಕ ಜನಾರ್ಧನರೆಡ್ಡಿ ಬೆಂಬಲಿಗರು ಈದ್ಗಾ ಮೈದಾನದ ಸಾಮೂಹಿಕ ಪ್ರಾರ್ಥನೆಯಲ್ಲಿ ರಾಜಕೀಯ ವ್ಯಕ್ತಿಗಳಿಗೆ ಮಾತನಾಡಲು ಅವಕಾಶ ನೀಡಬಾರದು ಎಂದು ವಕ್ಫ್ ಅಧಿಕಾರಿಗಳು ಮತ್ತು ಪೊಲೀಸರಿಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಇಕ್ಬಾಲ್ ಅನ್ಸಾರಿ ತಮ್ಮ ಬೆಂಬಲಿಗರಿಗೆ ಮತ್ತು ಅಭಿಮಾನಿಗಳಿಗೆ ಬೆಂಗಳೂರಿನಿಂದಲೇ ಭಾನುವಾರ ಸಾಮಾಜಿಕ ಜಾಲತಾಣಗಳ ಮೂಲಕ ಆಡಿಯೋ ಮೆಸೇಜ್ ರವಾನಿಸಿದ್ದಾರೆ. ಗಂಗಾವತಿಯಲ್ಲಿ ನನ್ನ ತಂದೆ ಎಂ.ಎಸ್.ಅನ್ಸಾರಿ ಇದ್ದಾಗಲಿಂದಲೂ ಕಳೆದ ಐವತ್ತು ವರ್ಷದಿಂದ ಮುಸ್ಲಿಂ ಸಮಾಜದ ಸಾಮೂಹಿಕ ಪ್ರಾರ್ಥನೆಯಲ್ಲಿ ಶ್ರದ್ಧೆಯಿಂದ ಭಾಗವಹಿಸಿದ್ದೇವೆ. ಮತ್ತು ಪ್ರಾರ್ಥನೆ ನಂತರ ಸಮಾಜದಪರವಾಗಿ ನನಗೆ ಮಾತನಾಡಲು ಅವಕಾಶ ನೀಡುತ್ತಾರೆ. ಈ ಸಂದರ್ಭದಲ್ಲಿ ನಾನು ಯಾವುದೇ ರಾಜಕೀಯ ವಿಷಯ ಕುರಿತು ಮಾತನಾಡದೇ ಮುಸ್ಲಿಂ ಸಮಾಜದ ಶ್ರೇಯೋಭಿವೃದ್ಧಿಗೆ ಮತ್ತು ಈದ್ಗಾ ಅಭಿವೃದ್ಧಿ ಕುರಿತು ಸಮಾಜಕ್ಕೆ ಮಾಹಿತಿ ನೀಡುತ್ತಾ ಬರುತ್ತೇವೆ. ನಾನು ಈದ್ಗಾ ಮೈದಾನವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮಿಸಿದ್ದೇನೆ. ಈದ್ಗಾಕಕ್ಕೆ ಆದಾಯ ಬರುವಂತೆ ಮಳಿಗೆಗಳನ್ನು ನಿರ್ಮಿಸಿ ಎಲ್ಲರಿಗೂ ಅನುಕೂಲವಾಗುವಂತೆ ಮಾಡಿದ್ದೇನೆ. ಆದರೆ ಕುಲಕ್ಕೆ ಕುಲ ವೈರಿ ಎಂಬಂತೆ ಇತ್ತೀಚಿಗೆ ನಮ್ಮ ಮುಸ್ಲಿಂ ಸಮಾಜದ ಕೆಲವು ವ್ಯಕ್ತಿಗಳು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಾ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಲು ಅವಕಾಶ ಕೊಡಬೇಡಿ ಎಂದು ವಕ್ಫ್ ಅಧಿಕಾರಿಗಳಿಗೆ ಬೇದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾನು ಯಾವುದೇ ಕಾರಣಕ್ಕೂ ಹೆದುರುವುದಿಲ್ಲ. ಕಾರಣಾಂತರಗಳಿಂದ ನಾನು ಇಂದಿನ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ಬರುತ್ತಿಲ್ಲ. ಇದ್ದರೆ ನಿಶ್ಚಿತವಾಗಿ ಮತ್ತು ಧೈರ್ಯವಾಗಿ ನಾನು ಮಾತನಾಡುತ್ತಿದ್ದೆ. ಸಮಾಜದಲ್ಲಿ ಸದಾ ಅಶಾಂತಿ ಸೃಷ್ಟಿಸಿ ರೌಡಿ ಶೀಟರ್‌ಗಳಾಗಿರುವ ವ್ಯಕ್ತಿ ಇಂದು ನನ್ನ ಮತ್ತು ನಮ್ಮ ಬೆಂಬಲಿಗರ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾನು ಸೊಪ್ಪು ಹಾಕುವುದಿಲ್ಲ. ನಾನು ದೈವೀಭಕ್ತನಾಗಿದ್ದು, ಹಿಂದು ಮತ್ತು ಮುಸ್ಲಿಂರ ನಡುವೆ ಸೌಹಾರ್ದತಯುತವಾಗಿ ಬದುಕುತ್ತಾ ಬರುತ್ತಿದ್ದೇವೆ. ಪ್ರಮಾಣಿಕವಾಗಿ ಇರುವ ವ್ಯಕ್ತಿಯಾಗಿರುವ ನಾನು ಯಾರ ಮುಲಾಜಿಗೊಳಗಾವುದಿಲ್ಲ. ನೇರ, ನಿಷ್ಟುರವಾಗಿ ಇರುವ ವಿಷಯವನ್ನು ನಾನು ಮಾತನಾಡುತ್ತೇನೆ. ಗಂಗಾವತಿಯಲ್ಲೇ ನನ್ನ ಮತ್ತು ನಮ್ಮ ಕುಟುಂಬದ ಜೀವನ ಮುಡಿಪಾಗಿರುತ್ತದೆ. ಗಂಗಾವತಿ ಅಭಿವೃದ್ಧಿಗೆ ನಾನು ನಿರಂತರ ಶ್ರಮಿಸುತ್ತೇನೆ. ಕೆಲವರು ಮಾಡುವ ಅಪಪ್ರಚಾರಕ್ಕೆ ಯಾರು ಕಿವಿಗೊಡಬಾರದು. ಯಾವುದೇ ದುಷ್ಟ ವ್ಯಕ್ತಿಗಳ ಪ್ರಚೋದನೆಗೆ ಒಳಗಗಾದೇ ಶಾಂತಿಯಿಂದ ಬಕ್ರೀದ್ ಹಬ್ಬ ಆಚರಿಸಿ. ನಾನು ಗಂಗಾವತಿಗೆ ಬಂದ ನಂತರ ಎಲ್ಲರೊಂದಿಗ ಕುಳಿತು ಚರ್ಚಿಸುತ್ತೇನೆ ಎಂದು ಇಕ್ಬಾಲ್ ಅನ್ಸಾರಿ ತಮ್ಮ ಬೆಂಬಲಿಗರಿಗೆ ಮೆಸೇಜ್ ರವಾನಿಸಿದ್ದಾರೆ.