ಗಂಗಾವತಿ.
ಅಖಿಲ ಭಾರತ ವೀರಶೈವ ಮಹಾಸಭಾದ ಗಂಗಾವತಿ ತಾಲೂಕ ಘಟಕದ ಅಧ್ಯಕ್ಷರಾಗಿ ಬಿಜೆಪಿ ಹಿರಿಯ ಮುಖಂಡ, ನ್ಯಾಯವಾದಿ ಹಾಗೂ ಮಾಜಿ ಕಾಡಾ ಅಧ್ಯಕ್ಷ ಹೆಚ್.ಗಿರೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತು ಮಹಾಸಭಾ ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ. ಗಿರೇಗೌಡ ಅಧ್ಯಕ್ಷರಾಗಿದ್ದು, ಐದು ವರ್ದ ಅವಧಿಗೆ ಅಧ್ಯಕ್ಷರಾಗಿರುತ್ತಾರೆ. ಇವರೊಂದಿಗೆ ಸದಸ್ಯರಾಗಿ ಮನೋಹರಗೌಡ ಹೇರೂರು, ಶರಣೆಗೌಡ ಮಾಲಿಪಾಟೀಲ್, ಅಮರೇಶಪ್ಪ ತಂದೆ ಅಡಿವೆಪ್ಪ ಹುಲ್ಕಿಹಾಳ್, ಕರಿಬಸಪ್ಪ ತಂದೆ ಪಂಪಾತೆಪ್ಪ ಬುದುಗುಂಪ, ಬಸವರಾಜ ಸ್ವಾಮಿ ತಂದೆ ಸಿದ್ದರಾಮ ಸ್ವಾಮಿ HM, ವಿಶ್ವನಾಥ್ ಮಾಲಿಪಾಟೀಲ್ ತಂದೆ ಶೇಖರಗೌಡ ಮಲಿಪಾಟೀಲ್ ಕೆಸರಟ್ಟಿ, ಶಾಂತಪ್ಪ ಗಣವಾರಿ, ಗುರುಸಿದ್ದಪ್ಪ, ಗಂಗಾವತಿ, ಕರಿಬಸಯ್ಯ ತಂದೆ ಬಸಯ್ಯ ಸ್ವಾಮಿ ಗಡ್ಡಿಮಠ, ಅಭಿಷೇಕ್ ಢಮ್
ತಂದೆ HB ಮಲ್ಲಿಕಾರ್ಜುನ
ಹಿರೇಜoತಕಲ್, ಮುಷ್ಟಿ ವಿರೂಪಾಕ್ಷಪ್ಪ
ತಂದೆ ಚನ್ನಬಸಪ್ಪ ಗಂಗಾವತಿ, ಮಂಜುನಾಥ್ ತಂದೆ ಲಿಂಗಣ್ಣ S ಮರಳಿ, ಸಿದ್ದಪ್ಪ ತಂದೆ ಈರಣ್ಣ ನಾಗೂರ್ ಗಂಗಾವತಿ, ಮನೋಹರ್ ಸ್ವಾಮಿ ಮುದೆನೂರ್ ತಂದೆ ಅಯ್ಯಸ್ವಾಮಿ ಮುದೇನೂರ್ ಗಂಗಾವತಿ, ಕೆ.ರೇವತಿ ಪಾಟೀಲ್ ಗಂಡ ಕೆ ಪಂಪಾಪತಿ ಪಾಟೀಲ್ ಗಂಗಾವತಿ, ಮಂಜುಳಾ ಗಂಡ ಸಂಜೀವಕುಮಾರ ಗಂಗಾವತಿ, ಸಂಧ್ಯಾ ಪಾರ್ವತಿ ಗಂಡ ಅಶೋಕ್ ಸ್ವಾಮಿ ಹೇರೂರು, ಉಮಾ ಶಿವಾನಂದ ಸ್ವಾಮಿ TM ಗಂಗಾವತಿ ಸೇರಿದಂತೆ 21 ಜನರು ಸದಸ್ಯರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಘೋಷಿಸಿದ್ದಾರೆ. ಈ ಹಿಂದೆ ಮಹಾಸಭಾ ಪದಾಧಿಕಾರಿಗಳ ಆಯ್ಕೆ ತೆರೆಮರೆಯಲ್ಲಿ ನಡೆಯುತ್ತಿತ್ತು. ಆದರೆ ಇತ್ತೀಚಿಗೆ ಮಹಾಸಭಾಕ್ಕೆ ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ವೀರಶೈವ ಲಿಂಗಾಯತ ಸಮಾಜದ ಬಹಳಷ್ಟು ಮುಖಂಡರು ನಾಮಪತ್ರ ಸಲ್ಲಿಸಿದ್ದರಿಂದ ಸಮಾಜದಲ್ಲಿ ಪೈಪೋಟಿ ನಡೆದು ಗೊಂದಲ ನಡೆಯಬಾರದೆಂಬ ಉದ್ದೇಶದಿಂದ ಎಲ್ಲ ಹಿರಿಯರು ಸೇರಿ ಗಿರೇಗೌಡರನ್ನು ಆಯ್ಕೆ ಮಾಡಿದ್ದು, ಈ ಬಾರಿಯ ವೀರಶೈವ ಮಹಾಸಭಾ ಗಂಗಾವತಿ ತಾಲೂಕು ಘಟಕದಲ್ಲಿ ಎಲ್ಲಾ ಒಳಪಂಗಡಗಳವರನ್ನುನ್ನು ಪರಿಗಣಿಸಿ ಅವಿರೋಧವಾಗಿ ಆಯ್ಕೆ ಮಾಡಿರುವುದು ಗಮನಾರ್ಹವಾಗಿದೆ ಎಂದು ಸಮಾಜದಲ್ಲಿ ಚರ್ಚೆಯಾಗಿದೆ.
