ಗಂಗಾವತಿ.
ತಾಲೂಕಿನ ಐತಿಹಾಸಿಕ ನವಬೃಂದಾವನ ಗಡ್ಡೆಯಲ್ಲಿ ಶ್ರೀಜಯತೀರ್ಥರ ಆರಾಧನಾ ಮಹೋತ್ಸವ ನಡೆಸಲು ಅವಕಾಶ ಕೊರಿ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದಿಂದ ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ಆನೆಗೊಂದಿ ರಾಯರ ಮಠದಲ್ಲಿ ಆರಾಧನೆ ನಡೆಯಲಿದೆ ಎಂದು ಶ್ರೀಮಠದಿಂದ ಪ್ರಕಟಣೆ ನೀಡಿದೆ.
ಈ ಕುರಿತು ಶ್ರೀಮಠದ ಪವರ್ ಆಫ್ ಅಟಾರ್ನಿ ಹೊಲ್ಡರ್ ವಾದೀಂದ್ರ ಆಚಾರ ತಿಳಿಸಿದ್ದಾರೆ. ಧಾರವಾಡದ ಕರ್ನಾಟಕ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದಲ್ಲಿ ದಾವೆ ಪೆಂಡಿಂಗ್ ನಲ್ಲಿ ಇದೆ. ಇಂದು ಧಾರವಾಡದ ಕರ್ನಾಟಕ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ನಮ್ಮ ಮಠದಿಂದ ಧಾರವಾಡದ ಏಕಸದಸ್ಯ ಪೀಠದ ಆದೇಶವನ್ನು ತಡೆ ಹಿಡಿಯುವಂತೆ. ಮತ್ತು ನವಬೃಂದಾವನದಲ್ಲಿ ಶ್ರೀಜಯತೀರ್ಥರ ಆರಾಧನೆಯನ್ನು ನಡೆಸಲು ಪರವಾನಿಗೆಯನ್ನು ನೀಡಲು, ಸಲ್ಲಿಸಿದ ಎರಡೂ ಅರ್ಜಿಗಳನ್ನು ವಜಾಗೊಳಿಸಿದೆ. ಹೀಗಾಗಿ ಶ್ರೀಮಠದ ಶಿಷ್ಯರು ಹಾಗು ಭಕ್ತರು ಯಾವುದೇ ಅತಂಕ ಪಡುವಂತಿಲ್ಲ. ಮುಂದಿನ ದಿನಗಳಲ್ಲಿ ಸೂಕ್ತವಾದ ಪರಿಹಾರವು ಹರಿವಾಯು ಗುರುಗಳ ಅನುಗ್ರಹದಿಂದ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವು ಇದ್ದೇ ಇದೆ. ಇದು ಅಂತಿಮ ತೀರ್ಪು ಅಲ್ಲ.ಕಾರಣ ಯಾರು ನಿರಾಶರಾಗಬಾರದು.
ಈ ವರ್ಷ ನವಬೃಂದಾವನದಲ್ಲಿ ಶ್ರೀಜಯತೀರ್ಥರ ಮೂಲ ಬೃಂದಾವನದ ಸನ್ನಿಧಾನದಲ್ಲಿ ಆರಾಧನೆಯನ್ನು ಮಾಡಲು ಕರ್ನಾಟಕದ ಉಚ್ಚ ನ್ಯಾಯಾಲಯವು ಪರವಾನಿಗೆ ನೀಡದ ಹಿನ್ನೆಲೆಯಲ್ಲಿ ಆನೇಗುಂದಿಯ ನಮ್ಮ ಶ್ರೀಮಠದ ಶಾಖೆಯಲ್ಲಿ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವವು ದಿನಾಂಕ 24, 25, 26/7/2024 ಈ ಮೂರು ದಿನಗಳು ಅತ್ಯಂತ ಶ್ರದ್ಧಾ ಭಕ್ತಿ ಸಡಗರದಿಂದ ನಡೆಯುತ್ತಲಿದೆ.ಶಿಷ್ಯರು, ಭಕ್ತರು ಅವಶ್ಯವಾಗಿ ಪಾಲ್ಗೊಂಡು ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೊರಿದ್ದಾರೆ.