ಗಂಗಾವತಿ.
ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ ಮಾಡಿದ್ದು 56 ದಿನದಲ್ಲಿ ರೂ.34 ಲಕ್ಷ ಹಣ ಸಂಗ್ರವಾಗಿದೆ. ಜೊತೆಗೆ ವಿದೇಶಿ ಕರೆನ್ಸಿ ಮತ್ತು ನಾಣ್ಯ ದೇಣಿಗೆಯಾಗಿ ಬಂದಿದೆ.
ಈ ಕುರಿತು ದೇವಸ್ಥಾನ ಆಡಳಿತಾಧಿಕಾರಿಗಳು ಪ್ರಕಟಣೆ ನೀಡಿದ್ದಾರೆ. ಮಂಗಳವಾರ ಕೊಪ್ಪಳ ಸಹಾಯಕ ಆಯುಕ್ತ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ನಿರ್ದೇಶನದಂತೆ ಗಂಗಾವತಿ ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹುಂಡಿ ತೆರೆದು ಎಣಿಕೆ ಮಾಡಿದ್ದಾರೆ. 02-07-2024 ರಿಂದ 27-08-2024 ರವರೆಗೆ ಒಟ್ಟು 56 ದಿನಗಳ ಅವಧಿಯಲ್ಲಿ ರೂ.36,96,983.00 ಗಳು 3 ವೇತನಂ, 3 ಮಲೇಶಿಯಾ, 1 ದುಬೈ ನಾಣ್ಯ ಹುಂಡಿಯಲ್ಲಿ ಸಂಗ್ರಹವಾಗಿವೆ.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಮೆಹಬೂಬ್ ಅಲಿ ಶಿರಸ್ತೇದಾರಾದ
ನರ್ಮದಾ , ಕೃಷ್ಣವೇಣಿ , ಸುಹಸ್ ಕಂದಾಯ ನಿರೀಕ್ಷಕರಾದ ಮಹೇಶ್ ದಲಾಲ್, ಹಾಲೇಶ ಗುಂಡಿ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಇಂದಿರಾ, ಅನ್ನಪೂರ್ಣ, ಆಹಾರ ನಿರೀಕ್ಷಕ ಶೇಖರಪ್ಪ ಮಹಮ್ಮದ್ ರಫೀಕ್ , ಕವಿತಾ ಎಸ್, ಸೌಭಾಗ್ಯ, ಕವಿತಾ , ಗಾಯತ್ರಿ, ಶ್ರೀರಾಮ ಜೋಶಿ , ಸುಧಾ, ಪ್ರವೀಣ್ ಜೋನ್ಸ್ ,ಮಂಜುನಾಥ ದುಮ್ಮಾಡಿ ,ಅಸ್ಲಾಂ ಪಟೇಲ್, ವೀರಯ್ಯ, ರಾಘವೇಂದ್ರ, ಸುನಿತಾ , ನಾಗಬಿಂದು , ಚೈತ್ರ, ಪ್ರಿಯಾಂಕ, ಗಾಯತ್ರಿ, ಶೈನಾಜ್ ಸಾಣಾಪುರ ಪಿಕೆಜಿಬಿ ಬ್ಯಾಂಕ್ ಸಿಬ್ಬಂದಿಗಳಾದ ಶ್ರೀಧರ್, ಸುನಿಲ್, ವೀರೇಶ್, ಶ್ರೀನಿವಾಸ್ ಪೋಲಿಸ್ ನಿರುಪಾದಿ, ಪ್ರವಾಸಿ ಮಿತ್ರ ಹನುಮಂತ, ವ್ಯವಸ್ಥಾಪಕ ವೆಂಕಟೇಶ ಮತ್ತು ದೇವಸ್ಥಾನದ ಸಿಬ್ಬಂದಿಗಳು ಇದ್ದರು.
ಪೊಲೀಸ್ ಮತಗತು ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಷಿಕೆ ಮಾಡಲಾಯಿತು. ಈ ಹಿಂದೆ ಜು.2ರಂದು ಹುಂಡಿ ತೆಗೆದ ಸಂದರ್ಭದಲ್ಲಿ ರೂ. 32,95,651.00 ಸಂಗ್ರಹವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
