ಗಂಗಾವತಿ.
ನಗರದ ಜುಲೈನಗರದಿಂದ ರಾಣಾ ಪ್ರತಾಪ್ ವೃತ್ತದವರೆಗೆ ಅಭಿವೃದ್ಧಪಡಿಸಿರುವ ರಸ್ತೆ ಮದ್ಯ ಹಾಕಿರುವ ವಿದ್ಯುತ್ ಕಂಬಳ ಚಿತ್ರಗಳು ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತಾಗಿದ್ದು, ತಕ್ಷಣ ಕಂಬಗಳನ್ನು ತೆರವು ಮಾಡಿ ಸಂಬಂಧಿಸಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ ಕೊಪ್ಪಳ [ಕೆ.ಐ.ಆರ.ಡಿ.ಎಲ್.] ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ ಅವರು ಗಂಗಾವತಿ ನಗರ ಠಾಣೆ ಆರಕ್ಷಕ ನಿರೀಕ್ಷಕರಿಗೆ ಅಧಿಕೃತವಾಗಿ ಸೂಚನೆ ನೀಡಿದ್ದಾರೆ.
ಆ,೨೮ ರಂದು ಜಿಲ್ಲಾಧಿಕಾರಿಗಳ ಮೌಖಿಕ ಆದೇಶದಂತೆ ತಹಶೀಲ್ದಾರ ಅವರು ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷರಿಗೆ ನೀಡಿರುವ ಆದೇಶದ ಪ್ರತಿ ಬಹಿರಂಗವಾಗಿದೆ. ಜುಲೈನಗರ ವೃತ್ತದಿಂದ ರಾಣಾ ಪ್ರತಾಪ ಸಿಂಗ್ ವೃತ್ತವು ನಗರಸಭೆ ವ್ಯಾಪ್ತಿಗೆ ಬರುತ್ತಿತ್ತು. ಇಲ್ಲಿ ಕೆ.ಐ.ಆರ,ಡಿಎಲ್ ಸಂಸ್ಥೆಯಿಂದ ಸ್ಥಾಪಿಸಿದ ವಿದ್ಯುತ ಕಂಬಗಳು ಧಾರ್ಮಿಕ ಸೌರ್ಹಧತೆ ಹಾಗೂ ಭಾವನೆಗಳಿಗೆ ದಕ್ಕೆ ಉಂಟು ಮಾಡುವ ರೀತಿಯಲ್ಲಿ ಸ್ಥಾಪಿಸಲಾಗಿದೆ. ಇದು ನಗರದಲ್ಲಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟುಮಾಡುವ ಸಾದ್ಯತೆಗಳು ಇರುವುದರಿಂದ, ಅವುಗಳನ್ನು ಕೂಡಲೇ ತೆರವುಗೊಳಿಸುವಲ್ಲಿ ಸೂಕ್ತ ಕ್ರಮ ಕೈಗೊಂಡು ಕಂಬಗಳನ್ನು ಹಾಕಿ ಕಾಮಗಾರಿ ಕೈಗೊಂಡಿರುವ ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ ಕೊಪ್ಪಳ [ಕೆ.ಐ.ಆರ.ಡಿ.ಎಲ್.] ಇವರು ನಗರದಲ್ಲಿ ಕಂಬಗಳನ್ನು ಸ್ಥಾಪಿಸಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಂಡು ಅನುಪಾಲನಾ ವರದಿ ಸಲ್ಲಿಸುವಂತೆ ತಹಶೀಲ್ದಾರರು ನೊಟೀಸ್ ಜಾರಿ ಮಾಡಿದ್ದಾರೆ.
ಜುಲೈನಗರದ ವೃತ್ತದಿಂದ ರಾಣಾ ಪ್ರತಾಪ್ ವೃತ್ತದವರೆಗೆ ರಸ್ತೆ ಅಭಿವೃದ್ಧಿಪಡಿಸಿ ಮದ್ಯದಲ್ಲಿ ಹಾಕಿರುವ ವಿದ್ಯುತ್ ಕಂಬಗಳ ಮೇಲ್ತುದಿಯಲ್ಲಿ ಬಿಲ್ಲು, ಗೋವಿಂದ ನಾಮ ಮತ್ತು ಗದೆಯ ಚಿತ್ರಗಳನ್ನು ಹಾಕಿದ್ದಾರೆ. ಇವುಗಳು ಧಾರ್ಮಿಕ ಮತ್ತು ಸೌಹಾರ್ದತೆಗೆ ಧಕ್ಕೆ ಬರಲಿದೆ. ಗಂಗಾವತಿ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇವುಗಳನ್ನು ತೆರವು ಮಾಡುವಂತೆ ಎಸ್‌ಡಿಪಿಐ ಕಾರ್ಯಕರ್ತರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರು. ಇದು ವಿವಾದಕ್ಕೆಡೆ ಮಾಡಿಕೊಟ್ಟಿದ್ದು, ನಗರದಲ್ಲಿ ಬಾರಿ ಚರ್ಚೆ ನಡೆಯುತ್ತಿದ್ದು, ಪೌರಾಯುಕ್ತು ಸಹ ಕೆಆರ್‌ಡಿಐಎಲ್ ಎಇಗೆ ಪತ್ರ ಬರೆದು ಇದರಿಂದ ನಗರದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ಬಂದರೆ ತಮ್ಮನ್ನೆ ಹೊಣೆ ಮಾಡುವುದಾಗಿ ಎಚ್ಚರಿಸಿದ್ದರು. ಇತ್ತ ಶಾಸಕರು ವಿದ್ಯುತ್ ಕಂಬಳಲ್ಲಿ ಅಳವಡಿಸಿರುವ ಚಿತ್ರಗಳು ಐತಿಹಾಸಿಕ ಅಂಜನಾದ್ರಿ ಪರ್ವತದ ಮಾರ್ಗಸೂಚಿಗೆ ಅನುಕೂಲವಾಗಿವೆ. ಅಂಜನಾದ್ರಿಗೆ ಬರುವ ಭಕ್ತರಲ್ಲಿ ಧಾರ್ಮಿಕ ಭಕ್ತಿ ಉಂಟಾಗುವುದರಿಂದ ಇವುಗಳನ್ನು ಅಳವಡಿಸಿದೆ. ಇದರಿಂದ ಯಾರ ಭಾವನೆಗೂ ಧಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಮತ್ತು ಬುಧವಾರ ನಗರಸಭೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲೂ ಕೂಡಾ ಶಾಸಕ ಜನಾರ್ಧನರೆಡ್ಡಿ ಅವರು ವಿಷಯ ಪ್ರಸ್ತಾಪಿಸಿ ಈ ವಿಷಯದಲ್ಲಿ ಅನವ್ಯಶಕ ಗೊಂದಲ ಸೃಷ್ಟಿಸಿದೆ ಎಲ್ಲರು ಸಹಕಾರ ನೀಡುವಂತೆ ಸದಸ್ಯರಿಗೆ ಮನವಿ ಮಾಡಿದ್ದರು. ಆದರೆ ಶಾಸಕರ ಮನವಿ ಬೆನ್ನಲ್ಲೆ ತಹಶೀಲ್ದಾರ ಅವರು ಕಂಬಗಳನ್ನು ತೆರವು ಮಾಢುವಂತೆ ಸೂಚನೆ ನೀಡಿರುವುದು ನಗರದಲ್ಲಿ ಗೊಂದಲದ ಸನ್ನಿವೇಶಕ್ಕೆಡೆ ಮಾಡಿಕೊಡಲಿದೆ ಎಂಬ ಚರ್ಚೆ ನಡೆಯುತ್ತಿದೆ.