ಗಂಗಾವತಿ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ವಿರೇಶ ಗುಡೂರು ನಗರಸಭೆ ಪೌರ ಕಾರ್ಮಿಕರು ಮತ್ತು ಶಾಲಾ ವಾಹನ ಚಾಲಕ ಮತ್ತು ಪರಿಚಾರಕಿಯೊಂದಿಗೆ ದೀಪಾವಳಿ ಆಚರಿಸಿದ್ದು, ಕುಟುಂಬಸ್ಥರು ಪೌರ ಕಾರ್ಮಿಕರಿಗೆ ತಮ್ಮ ಮನೆಯಲ್ಲಿ ಪ್ರೀತಿಯ ಭೋಜನ ಉಣಬಡಿಸಿ ಆದರ, ಆತಿಥ್ಯ ನೀಡಿದ್ದಾರೆ.
ನಗರದಲ್ಲಿ ಫೋಟೋ ಸ್ಟುಡಿಯೋ ಮತ್ತು ಮುಮೆಂಟೋಗಳ ವ್ಯಾಪಾರ ನಡೆಸುತ್ತಿರುವ ಆರ್‌ಎಸ್‌ಎಸ್ ಜಿಲ್ಲಾ ಮಟ್ಟದ ಕಾರ್ಯಕತರಾಗಿರುವ ವಿರೇಶ ಗುಡೂರು ಈ ಬಾರಿಯ ದೀಪಾವಳಿಯನ್ನು ನಿತ್ಯ ತಮ್ಮ ಮನೆಗೆ ಬಂದು ಕಸ ಸಂಗ್ರಹಿಸುವ ವಾಹನ ಚಾಲಕ ಪೌರ ಕಾರ್ಮಿಕರಾದ ಭಾಗಪ್ಪ, ಗಂಗಮ್ಮ ಚಲುವಾದಿ ಓಣಿ ಮತ್ತು ತಮ್ಮ ಮಗಳು ಶಾಲೆಗೆ ಹೋಗುವ ವಿದ್ಯಾನಿಕೇತನ ಶಾಲೆಯ ವಾಹನ ಚಾಲಕ ಬಸವರಾಜ ವಡ್ಡರಹಟ್ಟಿ ಹಾಗೂ ಶಾಲೆಯ ಪರಿಚಾರಕಿ ಸಂಗಮ್ಮ ಅವರನ್ನು ತಮ್ಮ ಮನೆಗೆ ಅಹ್ವಾನಿಸಿ ತಮ್ಮ ಕುಟುಂಬಸ್ಥರು ಮತ್ತು ಮಕ್ಕಳೊಂದಿಗೆ ಅವರಿಗೆ ಪ್ರೀತಿಯಿಂದ ಭೋಜನ ಉಣಬಡಿಸಿ, ಹೊಸ ಬಟ್ಟೆ ನೀಡುವ ಜೊತೆಗೆ ಆತಿಥ್ಯ ನೀಡಿದ್ದಾರೆ. ಇದೊಂದು ಸಾಮಾಜಿಕ ಸಾಮರಸ್ಯದ ಸಂಕೇತವಾಗಿದೆ ಎಂದು ವಿರೇಶ ಗುಡೂರ ಅವರ ಕಾರ್ಯವನ್ನು ಗೆಳೆಯರು ಶ್ಲಾಘಿಸಿದ್ದಾರೆ.
