ಗಂಗಾವತಿ.
ನಗರಸಭೆ ವ್ಯಾಪ್ತಿಯಲ್ಲಿ ಬರುವ ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಿ ಪರಿಣಮಕಾರಿಯಾಗಿ ಅನುಷ್ಠಾನಗೊಳಿಸ ಬೇಕಾಗಿರುವುದರಿಂದ ಸಾರ್ವಜನಿಕರಿಂದ ಆಸ್ತಿ ಕಣಜ ತಂತ್ರಾಂಶದಲ್ಲಿ ಅವಶ್ಯವಿರುವ ದಾಖಲೆಗಳ ಪ್ರತಿಗಳನ್ನು ಪಡೆದು ಅದೇ ದಿನದಂದು ಅರ್ಹ ಆಸ್ತಿಗಳಿಗೆ ನಮೂನೆ-೩ ನ್ನು ವಿತರಿಸಲು ನ.25 ರಿಂದ ನಗರಾದ್ಯಂತ ಶಿಬಿರವನ್ನು ಆಯೋಜಿಸಲಾಗಿದೆ. ನಗರದ ನಾಗರೀಕರು ಈ ಶಿಬಿರದಲ್ಲಿ ಪಾಲ್ಗೊಂಡು ನಿಯಮಾನುಸಾರ ದಾಖಲೆಗಳನ್ನು ಸಲ್ಲಿಸಿ ಶಿಬಿರದಲ್ಲೇ ನಿಮಗೆ ಅವಶ್ಯವಿರುವ ಫಾರ್‍ಮ-3 ಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಕರೆ ನೀಡಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳ ಮೂಲಕ ನಗರ ನಾಗರೀಕರಿಗೆ ಮಾಹಿತಿ ನೀಡಿದ್ದಾರೆ. ವಿವಿಧ ಸ್ಥಳಗಳಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ. ಸದ್ರಿ ಸ್ಥಳಗಳಿಗೆ ಆಯಾ ವಾರ್ಡಿನ ಸಾರ್ವಜನಿಕರು ಶಿಬಿರಕ್ಕೆ ಭೇಟಿ ನೀಡಿ ತಮ್ಮ ತಮ್ಮ ಆಸ್ತಿಗಳ ದಾಖಲಾತಿಗಳನ್ನು ಅಲ್ಲಿ ನಿಯೋಜಿಸಿರುವ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ನೀಡಿ ಆನ್‌ಲೈನ್ ತಂತ್ರಾಂಶದ ಮೂಲಕ ನಮೂನೆ-೩ ನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನ.25 ರಂದು ವಾರ್ಡ್ 1 ರಿಂದ 3 ಸಂಬಂಧಿಸಿದಂತೆ ವಾಲ್ಮಿಕಿ ವೃತ್ತದ ಹತ್ತಿರ ಸರಕಾರಿ ಪ್ರಾಥಮಿಕ ಶಾಲೆ ಬೆಂಡರವಾಡಿ, ನ.26 ರಂದು ವಾರ್ಡ್ 4ರಿಂದ 6 ಸ್ಥಳ ಮಹಾವೀರ ವೃತ್ತದ ಹತ್ತಿರ, ನ.27 ರಂದು ವಾರ್ಡ್ 7 ರಿಂದ 9ರ ನಾಗರೀಕರಿಗೆ ಈರಣ್ಣ ಗುಡಿ ಇಸ್ಲಾಂಪುರ, ನ.28 ರಂದು ೧೦ ಮತ್ತು 11ನೇ ವಾರ್ಡ್, ಇಸ್ಲಾಂಪುರ ವೃತ್ತ ಪಶು ಆಸ್ಪತ್ರೆ, ನ.29 ರಂದು ವಾರ್ಡ್ 12ರಿಂದ 15ರ ನಾಗರೀಕರಿಗೆ ಜುಲೈನಗರ ವೃತ್ತ ಸ್ವಾಗತ ಲಾಡ್ಜ್ ಹತ್ತಿರ, ನ.30 ರಂದು 16 ರಿಂದ ೧೮ನೇ ವಾರ್ಡ್ ಗಣೇಶ ವೃತ್ತದ ಹತ್ತಿರ, ಡಿಸೆಂಬರ್ 2 ರಂದು ನಗರದ 19ರಿಂದ 21 ನೇ ವಾರ್ಡ್ ಜನರಿಗಾಗಿ ಯಶೋಧಾ ಆಸ್ಪತ್ರೆ ಮುಂಗಾಬ ಭಗೀರಥ ವೃತ್ತದ ಹತ್ತಿರ ಶಿಬಿರ ಆಯೋಜಿಸಿದೆ. ಮತ್ತು ಡಿ.3 ರಂದು 22ರಿಂದ 24 ನೇ ವಾರ್ಡ್ ಜನರಿಗಾಗಿ ಅಂಬೇಡ್ಕರ ವೃತ್ತದಲ್ಲಿ ಶಿಬಿರ ನಡೆಸಲಾಗುತ್ತಿದೆ. ಡಿ.4  ರಂದು 25 ರಿಂದ 27ನೇ ವಾರ್ಡ್ ನೀಲಕಂಠೇಶ್ವರ ದೇವಸ್ಥಾನದ ಹತ್ತಿರ ಹಾಗೂ ಡಿ.5 ರಂದು 28 ರಿಂದ 31 ನೇ ವಾರ್ಡ್‌ನ ನಾಗರೀಕರಿಗಾಗಿ ಸರೋಮಜಮ್ಮ ಕಲ್ಯಾಣ ಮಂಟಪದಲ್ಲಿ ಶಿಬಿರ ಆಯೋಜಿಸಲಾಗಿದೆ.
ಈ ಮೇಲಿನಂತೆ ನಿಗದಿಪಡಿಸಲಾದ ಸ್ಥಳ ಹಾಗೂ ದಿನಾಂಕದಂದು ತಮಗೆ ಹತ್ತಿರವಾಗುವ ಶಿಬಿರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳಾದ ನೊಂದಾಯಿತ ಖರೀದಿ ಪತ್ರ, ದಾನಪತ್ರ, ಹಕ್ಕು ಪತ್ರ, ಖಾತಾನೊಂದಣಿ, ಖಾತಾ ಬದಲಾವಣೆ ಪ್ರತಿ ೨೦೨೪-೨೫ನೇ ಸಾಲಿನ ಆಸ್ತಿ ತೆರಿಗೆ, ನೀರಿನ ತೆರಿಗೆ ಪಾವತಿಯ ಪ್ರತಿ ಆಸ್ತಿ ಮಾಲೀಕರ ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಡಿ.ಎಲ್, ಪಡಿತರ ಚೀಟಿ, ವಿದ್ಯುತ್ ಆರ್‌ಆರ್.ನಂ., ಆಸ್ತಿ ಮಾಲೀಕರ ಭಾವಚಿತ್ರ, ಆಸ್ತಿಯ ಭಾವಚಿತ್ರ, ಎನ್‌ಎ ಆದೇಶ ಪ್ರತಿ, ಅನುಮೋದಿತ ಲೇಔಟ್ ಪ್ರತಿ, ನಿವೇಶನ ಬಿಡುಗಡೆ ಆದೇಶ, ಕೆ.ಜೆ.ಪಿ ನಕ್ಷೆ, (ಕಟ್ಟಡ ಇದ್ದಲ್ಲಿ) ಕಟ್ಟಡ ಪರವಾನಿಗೆ ನಕ್ಷೆ, ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಇವುಗಳನ್ನು ಸಲ್ಲಿಸಿ ಇ-ಆಸ್ತಿ ತಂತ್ರಾಶದಲ್ಲಿ ಅರ್ಹ ಆಸ್ತಿಗಳಿಗೆ ನಮೂನೆ-೩ ನ್ನು ಪಡೆಯಬಹುದು. ಈ ಅವಕಾಶವನ್ನು ನಗರದ ಸಾರ್ವಜನಿಕರು, ಆಸ್ತಿ ಮಾಲೀಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಪೌರಾಯುಕ್ತರು ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!