ಗಂಗಾವತಿ.
ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ನೈತಿಕ ಮತ್ತು ದೇಶಭಕ್ತಿಯ ಶಿಕ್ಷಣ ನೀಡುವುದು ಇಂದಿನ ದಿನಮಾನದಲ್ಲಿ ಅತ್ಯವಶ್ಯವಿದೆ ಎಂದು ವಿಜಯಪುರದ ಗದಗ ಶ್ರೀ ರಾಮಕೃಷ್ಣ ಸ್ವಾಮಿ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮಿಗಳು ಹೇಳಿದರು.
ಶನಿವಾರ ತಾಲೂಕಿನ ಪ್ರಗತಿ ನಗರದ ಭಾರತೀಯ ಬಾಲ ವಿದ್ಯಾಲಯ ಶಾಲೆಯ ಐವತ್ತು ವರ್ಷದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆವರಣದಲ್ಲಿ ಶಾಲೆಯ ಆಡಳಿತ ಮಂಡಳಿ ಮತ್ತು ಹಳೆಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವವದಲ್ಲಿ ಅವರು ಮಾತನಾಡಿದರು. ಇಂದ ಪ್ರತಿಯೊಬ್ಬ ವಿದ್ಯಾರ್ಥಿಗೆ ಎಲ್ಲಾ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಆದರೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಬ್ದಾರಿಯ ಅರಿವು ಮೂಡಿಸಿ ದೇಶ, ಧರ್ಮ, ಸಮಾಜ, ಪರಿಸರ ಕಾಳಜಿ ಮೂಡಿಸುವ ಶಿಕ್ಷಣದ ಕೊರತೆಯಾಗುತ್ತದೆ. ಸಮಾಜದೊಂದಿಗೆ ಬೆರೆಯುವ ವಾತಾವರಣ ತರಬೇಕು. ಎಷ್ಟೇ ವಿದ್ಯಾವಂತನಾದರೂ ತಂದೆ ತಾಯಿಯರನ್ನು, ಗುರು ಹಿರಿಯರನ್ನು ಗೌರವಿಸುವ ರೂಢಿ ಮಕ್ಕಳಲ್ಲಿ ಬರಬೇಕು. ವಿಶೇಷವಾಗಿ ಪಾಠ ಮಾಡುವ ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ನೈತಿಕ ಶಿಕ್ಷಣದ ಪ್ರಭಾವ ಬೀರಬೇಕು ಎಂದು ಕರೆ ನೀಡಿದರು.
ಶಾಲೆಯ ನಿವೃತ್ತ ಹಾಗೂ ಸಂಸ್ಥಾಪಕ ಹಿರಿಯ ಶಿಕ್ಷಕಿ ಪರಿಮಳ ಗುರುರಾಜ ಮಾತನಾಡಿ, ನಾನು ಈ ಶಾಲೆಯ ಪ್ರಾರಂಭದ ಶಿಕ್ಷಕಿಯಾಗಿ ಇಲ್ಲಿ ಕೆಲಸ ಮಾಡಿದ್ದೇನೆ. ಅಂದು ಈ ಶಾಲೆ ಮಾತ್ರ ಇಂಗ್ಲೀಸ್ ಮಾಧ್ಯಮ ಶಾಲೆಯಾಗಿತ್ತು. ಈ ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಐವತ್ತು ವರ್ಷ ಪೂರೈಸಿಕೊಳ್ಳುತ್ತಿರುವ ಈ ಶಾಲೆಗೆ ಇಂದು ನನ್ನನ್ನು ಅಹ್ವಾನಿಸಿ ಕಾರ್ಯಕ್ರಮ ಉದ್ಘಾಟನೆಗೆ ಅವಕಾಶ ನೀಡಿರುವುದು ನನಗೆ ಅತ್ಯಂತ ತೃಪ್ತಿದಾಯಕವಾಗಿದೆ. ಐವತ್ತು ವರ್ಷವಾದರೂ ಶಾಲೆಯಲ್ಲಿ ಕಲಿತ ಅಂದಿನ ಮತ್ತು ಇಂದಿನ ವಿದ್ಯಾರ್ಥಿಗಳು, ಆಡಳಿತ ಮಂಡಳಿಯವರು ನನಗೆ ಗೌರವ ನೀಡಿರುವುದಕ್ಕೆ ಇಂದು ನನ್ನ ಜೀವನ ಸಾರ್ಥಕವಾಗಿದೆ ಎಂಬ ಭಾವನೆ ಬಂದಿದೆ. ಅವರೆಲ್ಲಿರಗೂ ನಾನು ಸದಾ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ಮಾತನಾಡಿ, ನಮ್ಮ ಶಾಲೆ ತಾಲೂಕಿನಲ್ಲೆ ಪ್ರತಿಷ್ಟಿತ ಶಾಲೆಯಾಗಿದೆ. ಇಂತಹ ಶಾಲೆಯನ್ನು ಮುನ್ನಡೆಸುವ ಅವಕಾಶ ನಮಗೆ ಸಿಕ್ಕಿರುವುದು ನಮಗೆ ಸಂತೋಷವಾಗಿದೆ. ಸುವರ್ಣ ಮಹೋತ್ಸವ ಆಚರಿಸಲು ಶಾಲೆಯ ಶಿಕ್ಷಕರು, ಹಳೆಯ ಮತ್ತು ಇಂದಿನ ವಿದ್ಯಾರ್ಥಿಗಳ ಸಹಕಾರ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಈ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿ ಹಿಂದಿನಂತೆ ಮತ್ತೆ ಈ ಶಾಲೆಯ ಪ್ರತಿಷ್ಟಿತ ಶಾಲೆಯನ್ನಾಗಿ ಮಾಡುವ ಸಂಕಲ್ಪ ನಾವೆಲ್ಲರು ಮಾಡಿದ್ದೇವೆ. ಇದಕ್ಕೆ ಎಲ್ಲಾ ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದು ಕೊರಿದರು.
ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ಮತ್ತು ಇಂದಿನ 4000 ವಿದ್ಯಾರ್ಥಿಗಳು ಹಾಗೂ ೨೦೦ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯ ಕುಮಾರೆಪ್ಪ ಸಿಂಗನಾಳ, ಮುಖ್ಯೋಪಾಧ್ಯಾಯ ಹೇಮಂತರಾಜ ಕಲ್ಮಂಗಿ ಮತ್ತಿತರು ಇದ್ದರು.

 

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!