ಗಂಗಾವತಿ.
ನಗರದ ಪಂಪಾನಗರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆಯಲ್ಲಿ ಪತ್ರಕರ್ತ ಪ್ರಸನ್ನ ದೇಸಾಯಿ ಗುಂಪಿನ ಏಳು ಸದಸ್ಯರು ಗೆಲುವು ಸಾಧಿಸಿದ್ದು, ನಿರ್ದೇಶಕರು ಮತ್ತು ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಭಾನುವಾರ ನಗರದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢ ಶಾಲೆಯಲ್ಲಿ ಚುನಾವಣೆ ನಡೆಸಲಾಯಿತು. ಸಂಘದ ಏಳು ಜನ ಸಾಮಾನ್ಯ ನಿರ್ದೇಶಕರ ಸ್ಥಾನಕ್ಕೆ ಹತ್ತು ಜನ ಸ್ಪರ್ಧಿಸಿದ್ದು, ಚುನಾವಣೆ ಭಾರಿ ಮಹತ್ವ ಪಡೆದುಕೊಂಡಿತ್ತು. ಅವಿರೋಧ ಮಾಡಲು ಹರ ಸಾಹಸಪಟ್ಟರು ಕೆಲವರು ಅನವಶ್ಯಕವಾಗಿ ಸ್ಪರ್ಧೆಗಿಳಿದು ಚುನಾವಣೆ ನಡೆಯುವಂತೆ ಮಾಡಿದ್ದರು. ಹೀಗಾಗಿ ಈ ಚುನಾವಣೆಯಲ್ಲಿ ಪತ್ರಕರ್ತ ಪ್ರಸನ್ನ ದೇಸಾಯಿ ಸೇರಿದಂತೆ ಏಳು ಜನ ಒಂದಾಗಿ ಮತ ಯಾಚನೆ ಮಾಡಿ ಕೊನೆವರೆಗೂ ಗೆಲ್ಲಬೇಕೆಂಬ ಹಠದಿಂದ ಕೆಲಸ ಮಾಡಿದ್ದರು. ಸಂಜೆ 4 ಗಂಟೆಗೆ ಮತದಾನ ಮುಕ್ತಾಯದ ನಂತರ ಏಣಿಕೆ ನಡೆದಿದ್ದು, ಕಣದಲ್ಲಿದ್ದ ಹತ್ತು ನಿರ್ದೇಶಕರಲ್ಲಿ ಅನಿಲ್ ಕುಷ್ಟಗಿ-826, ಪ್ರಸನ್ನ ದೇಸಾಯಿ-820, ಪ್ರಶಾಂತ ಹಾಲಳ್ಳಿ-795, ಸಿ.ಪದ್ಮನಾಭ-756 ಕಾಳಪ್ಪ ಬಡಿಗೇರ-743, ರಾಘವೇಂದ್ರ- 697, , ಮಹೇಶ ಕುಮಾರ.ಎ.ಕೆ-674, ಪ್ರಹ್ಲಾದರಾವ್ ಹೇರೂರು -330, ಶಿವಯೋಗಿ ಅಂಗಡಿ-275 ಪ್ರಸಾದ ಪಾನಘಂಟಿ-83 ಮತಗಳನ್ನು ಪಡೆದುಕೊಂಡಿರುವ ಮಾಹಿತಿಯನ್ನು ಚುನಾವಣಾಧಿಕಾರಿಗಳು ಹಂಚಿಕೊಂಡರು. ಸ್ಪರ್ಧೆ ಮಾಡಿದ್ದ ಹತ್ತು ಜನ ನಿರ್ದೇಶಕರ ಪೈಕಿ ಕಡಿಮೆ ಮತ ಪಡೆದಿರುವ ಪ್ರಹ್ಲಾದ್ ಹೇರೂರು, ಶಿವಯೋಗಿ ಅಂಗಡಿ ಮತ್ತು ಪ್ರಸಾದ ಪಾನಗಂಡಿ ಪರಾಭವಗೊಂಡಿರುದ್ದಾರೆ. ಚುನಾಯಿತ ಏಳು ಜನ ನಿರ್ದೇಶಕರು ಮತ್ತು ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಮಿಸಲು ಕ್ಷೇತ್ರ ಸೇರಿದಂತೆ ಒಟ್ಟು 13 ಜನ ನಿರ್ದೇಶಕರನ್ನು ಪಂಪಾನಗರ ಗೃಹ ನಿರ್ಮಾಣ ಸಂಘಕ್ಕೆ ಆಯ್ಕೆ ಮಾಡಬೇಕಾಗಿದ್ದು, ಮೀಸಲು ಕ್ಷೇತ್ರದಲ್ಲಿ ಈಗಾಗಲೇ ಮಹಾಬಳೇಶ್ವರ ಅಂಗಡಿ, ಶ್ರೀನಿವಾಸ ಧೂಳಾ, ಜೋಗದ ಕೃಷ್ಣ ನಾಯಕ, ಸ್ವಾತಿ ಮೃತ್ಯುಂಜಯಸ್ವಾಮಿ, ಬಸವರಾಜ ಮತ್ತು ಅನಿತಾ ಅಳವಂಡಿಕರ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಶಂಕರಗೌಡ ಹೊಸಳ್ಳಿ, ನಗರಸಭೆ ಸದಸ್ಯ ವಾಸುದೇವ ನವಲಿ, ಚಂದ್ರಶೇಖರ ಅಕ್ಕಿ, ಶ್ರೀನಿವಾಸ ಧೂಳಾ, ಬದರಿ ಆದಾಪುರ, ಅನಿಲ್ ದೇಸಾಯಿ, ಗುರುರಾಜ ಚಿರ್ಚನಗುಡ್ಡ, ವೆಂಕಟೇಶ ಕುಲಕರ್ಣಿ ಮತ್ತಿತರು ಇದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!