ಗಂಗಾವತಿ.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗ್ಯಾರಂಟಿ ಯೋಜನೆ ತಾಲೂಕನಲ್ಲಿ ಆರು ತಿಂಗಳಿಂದ ಯಾವುದೇ ಪ್ರಗತಿ ಕಾಣುತ್ತಿಲ್ಲ.   ವಿಶೇಷವಾಗಿ ಗಂಗಾವತಿ ತಾಲೂಕಿನ ಆಹಾರ ಇಲಾಖೆಯ ಗ್ಯಾರಂಟಿ ಫಲಾನುಭವಿಗಳ ಡಾಟಾ ಆರು ತಿಂಗಳಿಂದ ಒಂದೇ ರೀತಿ ಇದೆ. ನಾವು ಪ್ರಗತಿ ಪರಿಶೀಲನಾ ಸಭೆಗೆ ಬರೋದು ಕಾಲಹರಣ ಮಾಡೊದಕ್ಕೆ ಎಂಬಂತಾಗಿದೆ ಎಂದು  ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಗಂಗಾವತಿ ತಾಲೂಕಿನ ಸದಸ್ಯರು ಅಸಮಾಧಾನ ಹೊರಹಾಕಿದರು.
ಸೋಮವಾರ ನಗರದ ತಾಪಂ ಮಂಥನ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನಷ್ಟಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಹಾರ ಇಲಾಖೆ ಶಿರಸ್ತೇದಾರ ಸುಹಾಸ್ ವರದಿ ಮಂಡಿಸುತ್ತಿರುವಾಗ ಮಧ್ಯ ಪ್ರವೇಸಿದಿಸಿದ ಸದಸ್ಯ ಮುಸ್ತಕ್ ಮಾತನಾಡಿ ಗ್ಯಾರಂಟಿ ಯೋಜನೆ ಪ್ರಗತಿಯ ಬಗ್ಗೆ ಬೇಸರ ವ್ಯಕ್ತಪಡಿಸಿ, ನಾವು ಸದಸ್ಯರಾಗಿ ಆರು ತಿಂಗಳಾಯಿತು. ಪ್ರತಿ ತಿಂಗಳ ಸಭೆಗೆ ಬರುತ್ತೇವೆ. ಸಭೆಯಲ್ಲಿ ಪ್ರತಿ ತಿಂಗಳು ಒಂದೇ ರೀತಿ ಡಾಟಾವನ್ನೆ ವರದಿ ನೀಡುತ್ತಾರೆ.  ಪ್ರಗತಿಯೇ ಕಾಣುತ್ತಿಲ್ಲ.  ಹೀಗಾದರೆ ನಾವು ಮಿಟಂಗ್ ಗೆ ಬರೋದೆ ವೆಸ್ಟ್. ಸುಮ್ಮನೆ ನಾವು ಮನೆಯಲ್ಲೆ ಇರುತ್ತೇವೆ.  ಎಲ್ಲಾ ಪ್ರಗತಿಯನ್ನು ಕಾಗದಲ್ಲಿ ಸರಕಾರಕ್ಕೆ ಕೊಟ್ಟುಬಿಡಿ ಎಂದು ಅಧ್ಯಕ್ಷ ವೆಂಕಟೇಶ ಬಾಬುಗೆ ಮುಸ್ತಕ್ ಮನವಿ ಮಾಡಿದರು.  ಮುಸ್ತಫ್ ಮಾತಿಗೆ ಎಲ್ಲಾ ಸದಸ್ಯರು ಧ್ವನಿಗೂಡಿಸುತ್ತಿದ್ದಂತೆ ಶಿರಸ್ತೇದಾರ ಸುಹಾಸ್ ಮರು ಮಾತನಾಡಿ, ನೀವು ವಿರೋಧ ಪಕ್ಷದವರಂತೆ ಮಾತನಾಡುತ್ತಿದ್ದೀರಿ. ನಾವು ಯೋಜನೆ ಅನುಷ್ಟಾನಕ್ಕಾಗಿ ಯಾವ ರೀತಿ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ತಿಳಿದುಕೊಂಡು ನಮ್ಮ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಬೆಸರ ವ್ಯಕ್ತಪಡಿಸಿದರು.  ಸದಸ್ಯರ ಮತ್ತು ಅಧಿಕಾರಿಗಳ ನಡುವೆ ಸಭೆಯಲ್ಲಿ ಮಾತಿನ ವಾಗ್ವಾದ ನಡೆಯಿತು. ಮದ್ಯ ಪ್ರವೇಸಿಸಿದ ಜಿಲ್ಲಾ ಉಪಾಧ್ಯಕ್ಷ S.B.ಖಾದ್ರಿ ಮಾತನಾಡಿ, ಪ್ರಗತಿ ವರದಿಯ ಡಾಟಾ ಆರು ತಿಂಗಳಿಂದ ಒಂದೇ ರೀತಿ ಇರುವದರಿಂದ ಸಾಧನೆ ಗೊತ್ತಾಗುತ್ತಿಲ್ಲ. ಸರಕಾರ ನಮಗೆ ಯೋಜನೆ ಅನುಷ್ಟಾನಕ್ಕಾಗಿ ನೇಮಕ ಮಾಡಿ ಗೌರವಧನ ಕೊಡುತ್ತಿದೆ. ನಮಗು ಜವಬ್ದಾರಿ ಇರೋದರಿಂದ ಸದಸ್ಯರು ಪ್ರಶ್ನೆ ಮಾಡುತ್ತಿದ್ದಾರೆ.  ಅಧಿಕಾರಿಗಳು ಸಮಧಾನದಿಂದ ಉತ್ತರ ನೀಡಿ ಸರಿಯಾದ ಪ್ರಗತಿ ವರದಿ ಕೊಡಬೇಕು ಎಂದು ಸಭೆಯ ವಾತಾವರಣ ತಿಗೊಳಿಸಿದರು.  ನಂತರ ಸಿಡಿಪಿಓ ವರದಿ ನೀಡಿ ರೂ.2000 ಹಣ ನವೆಂಬರ್ ತಿಂಗಳಿಂದ ಬಂದಿಲ್ಲ.  ನಮ್ಮ ಇಲಾಖೆಯಲ್ಲೂ ಕೂಡಾ ಸರಿಯಾಗಿ ಡಾಟಾ ಸಿಗುತ್ತಿಲ್ಲ ಮದು ಸಬೂನ್ ನೀಡಿದರು.
ಅಧ್ಯಕ್ಷ ವೆಂಕಟೇಶಬಾಬು, ಜಿಲ್ಲಾ ಸದಸ್ಯ ಆನಂದ ಆಸಲಕರ್, ಸದಸ್ಯ ಸನ್ನಿಕ್ ಮತ್ತಿತರು ಇದ್ದರು.
ಬಾಕ್ಸ್
ನಿರ್ವಾಹಕರಲ್ಲಿ ಸೌಜನ್ಯ ಇಲ್ಲ.
ಶಕ್ತಿ ಯೋಜನೆಯ ಉಚಿತ ಪ್ರಯಾಣ ಮಹಿಳೆಯರಿಗೆ ಸಾಕಷ್ಟು ವರದಾನವಾಗಿದೆ.  ಸರಕಾರದ ಯೋಜನೆ ಜನರಿಗೆ ತಲುಪಬೇಕು.  ಆದರೆ ಕೆಲವು ನಿರ್ವಾಹಕರು ಪ್ರಯಾಣಿಕರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.  ಈ ರೀತಿ ವರ್ತಿದರೆ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ.  ಅಂತಹ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಎಸ್ ಆರ್ ಟಿಸಿ  ಘಟಕ ಮೇಲ್ವಿಚಾರಕ ಮಲ್ಲಿಕಾರ್ಜುನಗೆ  ಗ್ಯಾರಂಟಿ ಸದಸ್ಯ ಮುಸ್ತಕ್  ಸಭೆಯಲ್ಲಿ ತಾಕೀತು ಮಾಡಿದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!