ಗಂಗಾವತಿ.
ತಾಲೂಕಿನ ಕೇಸರಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಳೆದ ಡಿಸೆಂಬರ್ 22 ರಂದು ನಡೆದಿದ್ದ ನಿರ್ದೇಶಕರ ಚುನಾವಣೆ ಕೋರ್ಟ್ ನಿರ್ದೇಶನದಂತೆ ಅಧಿಕೃತವಾಗಿ ಫಲಿತಾಂಶ ಘೋಷಣೆ ಮಾಡಲಾಗಿದ್ದು, ಚನ್ನಪ್ಪ ಮಳಗಿ ಮತ್ತು ಮಾಲೀಗೌಡರ ನಡುವೆ ನಡೆದಿದ್ದ ಚುನಾವಣೆಯಲ್ಲಿ ಮಾಲೀಗೌಡರ ಗುಂಪಿಗೆ ಗೆಲುವಾಗಿದೆ.
ಈ ಕುರಿತು ಮಾಲೀಗೌಡರ ಗುಂಪಿನ ನಿರ್ದೇಶಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಒಟ್ಟು 12 ಜನ ನಿರ್ದೇಶಕರನ್ನು ಹೊಂದಿರುವ ಕೆಸರಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಸಂಘದ ಐದು ವರ್ಷದ ಅವಧಿಗೆ ಚುನಾವಣೆ ಘೋಷಣೆ ಮಾಡಲಾಗಿತ್ತು. ಇದಲ್ಲಿ ರೇಣುಕಮ್ಮ ಗಂಡ ಬಸವನಗೌಡ ಮಾಲೀಪಾಟೀಲ್ ಮತ್ತು ದೇವಮ್ಮ ಗಂಡ ಮಲ್ಲಿಕಾರ್ಜುನ ಲಾಯದುಣಿಸಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ ಹತ್ತು ಜನ ನಿರ್ದೇಶಕರ ಸ್ಥಾನಕ್ಕೆ ೨೧ಜನ ಸ್ಪರ್ಧಿಸಿದ್ದರಿಂದ ಡಿ.೨೨ ರಂದು ಚುನಾವಣೆ ನಡೆಸಲಾಗಿತ್ತು. ಆದರೆ ಚುನಾವಣೆಯಲ್ಲಿ ಅನರ್ಹ ಮತದಾರರು ಮತದಾನ ಮಾಡಿರುವ ಕುರಿತು ಚನ್ನಪ್ಪ ಮಳಗಿ ಗುಂಪಿನ ನಿರ್ದೇಶಕರು ಕೋರ್ಟ್ ಮೆಟ್ಟಿಲೇರಿತ್ತು. ಹೀಗಾಗಿ ಇಲ್ಲಿವರೆಗೂ ಕೋರ್ಟ್ ಎಲ್ಲವನ್ನು ಪರಿಶೀಲಿಸಿ ಎರಡು ಅರ್ಹ ಮತ್ತು ಅನರ್ಹ ಮತದಾರರ ಮತಗಳನ್ನು ಪ್ರತ್ಯೇಕವಾಗಿ ಎಣಿಕೆ ಮಾಡಿ ಫಲಿತಾಂಶ ಘೋಷಿಸುವಂತೆ ಚುನಾವಣಾಧಿಕಾರಿಗೆ ಸೂಚನೆ ನೀಡಲಾಗಿತ್ತು. ಕೋರ್ಟ್ ನಿರ್ದೇಶನದಂತೆ ಚುನಾವಣಾಧಿಕಾರಿಗಳು ಫೆ.೧೯ ರಂದು ಫಲಿತಾಂಶ ಘೋಷಣೆ ಮಾಡಿದ್ದು, ಮಾಲೀಗೌಡರ ಗುಂಪಿನ ಎಲ್ಲಾ ಹತ್ತು ಜನ ನಿರ್ದೇಶಕರು ಚುನಾಯಿತರಾಗಿದ್ದಾರೆ ಎಂದು ಅಧಿಕೃತ ಘೋಷಣೆ ಮಾಡಿದರು. ಘೋಷಣೆಯಾಗುತ್ತಿದ್ದಂತೆ ಗೆಲವು ಸಾಧಿಸಿದ ನಿರ್ದೇಶಕರು ಸಂಭ್ರಮಿಸಿ ಮಳಗಿ ಅವರಿಗೆ ಮುಖಭಂಗವಾಗಿದೆ ಎಂದು ಕುಟುಕಿದರು.
ಪ್ರಾಥಮಿಕ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ವಕೀಲ ಚೆನ್ನಪ್ಪ ಮಳಿಗೆ ಹಾಗೂ ಮಾಲಿಗೌಡರ ಬಣದ ವಕೀಲ್ ರಮೇಶ್ ಮಾಲಿಪಾಟೀಲ್, ಬಸವರಾಜ ಹಳ್ಳಿ, ಮಹಾಂತಗೌಡ ಮಾಲಿ ಪಾಟೀಲ್ ನಡುವೆ ಜಿದ್ದಾ ಜಿದ್ದೆ ಏರ್ಪಟ್ಟಿದ್ದನ್ನು ಸ್ಮರಿಸಬಹುದಾಗಿದೆ. ಫಲಿತಾಂಶದಂತೆ ಮಹಾಂತಾಶ್ ಮಲಿಪಾಟೀಲ್ ವಿಶ್ವನಾಥ ಎಂ.ಮಾಲೀಪಾಟೀಲ್, ವಿಶ್ವನಾಥ.ಎಸ್.ಮಲಿಪಾಟೀಲ್, ವೀರನಗೌಡ ಪೊಲೀಸ್ ಪಾಟೀಲ್, ಬಸವರಾಜ ಹಳ್ಳಿ, ಸಿದ್ದಯ್ಯ ಗದ್ದಿಗಿ, ಲಕ್ಷಮಣ ಭೋವಿ, ಪಂಪಾಪತಿ ನಾಯಕ, ಅಮರೇಶ ಚಕೋಟಿ, ಯಮನೂರಪ್ಪ ಮರಕುಂಬಿ ಅವರುಗಳು ಚುನಾಯಿತರಾಗಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.
