ಗಂಗಾವತಿ.
ಕೊಪ್ಪಳ ತಾಲೂಕಿನ ಮತ್ತು ಗಂಗಾವತಿ ವಿಧಾನಸಭೆ ಕ್ಷೇತ್ರದ ಹಳೆಕುಮಟ ಗ್ರಾಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಹೆಚ್.ಆರ್.ಶ್ರೀನಾಥ ಹೆಸರಿನ ಕಾಲೋನಿ ಮಾಡಿದ್ದು, ಶಾಸಕ ಜನಾರ್ಧನರೆಡ್ಡಿ ಶನಿವಾರ ನಾಮಫಲಕ ಅನಾವರಣಗೊಳಿಸಿದರು.
ಈ ಹಿಂದೆ ಶ್ರೀನಾಥ ಅವರು ಗ್ರಾಮದ ಜನರ ವಸತಿಗಾಗಿ 3 ಎಕರೆ ಭೂಮಿಯನ್ನ ನೀಡಿದ್ದರು ಈ ಹಿನ್ನೆಲೆಯಲ್ಲಿ H R ಶ್ರೀನಾಥ್ ಕಾಲೋನಿಯನ್ನು ಮಾಡಿ ಅವರ ಸೇವಾ ಕಾರ್ಯವನ್ನು ಶ್ಲಾಘಸಿ ನಾಮಫಲಕ ಅಳವಡಿಸಿದ್ದರು. ನಾಮಫಲಕ ಅನಾವರಣಗೊಳಿಸಿ ನಂತರ ಶಾಸಕ ಜನಾರ್ಧನರೆಡ್ಡಿ ಮಾತನಾಡಿ, ಹೆಚ್.ಜಿ.ರಾಮುಲು ಮತ್ತು ಶ್ರೀನಾಥ ಕುಟುಂಬ ಹತ್ತಾರು ರೀತಿಯ ಸೇವಾ ಕಾರ್ಯ ಕೈಗೊಂಡಿದೆ. ಸೇವೆ ಮತ್ತು ಧರ್ಮ ಕಾರ್ಯದ ಮೂಲಕ ಜನರ ಒಳಿತಿಗಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಕುಟುಂಬದ ಜೊತೆ ಜಿಲ್ಲೆ ಜನರು ಇದ್ದಾರೆ ಶ್ರೀನಾಥ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಮಾಜಿ MLC ಕರಿಯಣ್ಣ ಸಂಗಟಿ ಮತ್ತಿತರು ಇದ್ದರು.
