ಗಂಗಾವತಿ.
ತಾಲೂಕಿನ ಕೆಸರಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಮರೇಶ ತಂದೆ ವೆಂಕರೆಡ್ಡಪ್ಪ ಚಕೋಟಿ ಉಪಾಧ್ಯಕ್ಷರಾಗಿ ವಿಶ್ವನಾಥ ತಂದೆ ಮುದಿಗೌಡ ಮಾಲಿಪಾಟೀಲ್ ಆಯ್ಕೆಯಾಗಿದ್ದಾರೆ.
ಶನಿವಾರ ಆಯ್ಕೆ ಪ್ರಕ್ರಿಯೆ ನಡೆದು ಸರ್ವ ನಿರ್ದೇಶಕರು ಸಭೆ ನಡೆಸಿ ಅಧ್ಯಕ್ಷ ಉಪಾಧ್ಯರನ್ನು ಅವಿರೋಧವಾಗಿ ಎಲ್ಲರ ಸಹಮತದಿಂದ ಆಯ್ಕೆ ಮಾಡಲಾಯಿತು ಎಂದು ಉಪಾಧ್ಯಕ್ಷ ವಿಶ್ವನಾಥ ಮಾಲೀಪಾಟೀಲ್ ತಿಳಿಸಿದ್ದು, ಮತದಾರರ ಪಟ್ಟಿ ಗೊಂದಲದಿಂದ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯ ಫಲಿತಾಂಶವನ್ನು ಕೋರ್ಟ್ ನಿರ್ದೇಶನದಂತೆ ಮತ ಎಣಿಕೆ ಮಾಡಿ ಘೋಷಣೆ ಮಾಡಲಾಗಿತ್ತು. ಆದರೆ ಮಳಗಿ- ಮಾಲೀಗೌಡರ ನಡುವಿನ ಜಿದ್ದಾಜಿದ್ದಿ ಎಂದು ಕೆಲವರು ತಪ್ಪು ಮಾಹಿತಿ ನೀಡಿರುವುದು ಖಂಡನೀಯವಾಗಿದೆ. ಇಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕೂಡಾ ಯಾವುದೇ ಗೊಂದಲವಿಲ್ಲದಂತೆ ನಡೆಸಲಾಗಿದೆ. ಆಯ್ಕೆಗೆ ಸಹಕರಿಸಿದ ಎಲ್ಲ ನಿರ್ದೇಶಕರಿಗೂ ಕೆಸರಟ್ಟಿ, ಹಂಚಿನಾಳ, ಮರಕುಂಬಿ ರೈತಾಪಿ ವರ್ಗದ ಮತದಾರರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಅಯ್ಕೆ ಪ್ರಕ್ರಿಯೆ ನಂತರ ನಿರ್ದೇಶಕರು, ಬೆಂಬಲಿಗರು ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಜಿ.ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಹಳ್ಳಿ, ನಿರುಪಾದಿಗೌಡ, ಖಾಸಿಂಸಾಬ್, ಯಮನೂರಪ್ಪ, ರಾಮಕೃಷ್ಣ, ಶಂಕರೇ ಸ್ವಾಮಿ ಹಿರೇಮಠ, ದೇವರಾಜ್, ಸಂಗಣ್ಣ, ಶರಣಪ್ಪ, ಮಹೇಶ ಜೆಕಿನ್, ವೀರಭದ್ರಯ್ಯ, ದೇವರಾಜ್ ನಾಯಕ್ ಮತ್ತಿತರು ಇದ್ದರು.
