ಗಂಗಾವತಿ.
ರಾಷ್ಟ್ರೀಯ ಲೋಕ ಸದಾಲತ್ ಹಿನ್ನೆಲೆಯಲ್ಲಿ ನಗರದ ನ್ಯಾಯಾಲಯದಲ್ಲೂ ಲೋಕ ಅದಾಲತ್ ಆಯೋಜಿಸಿದ್ದು,
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ಹಿರಿಯ ಸಿವಿಲ್ ಹಾಗೂ ಪ್ರಭಾರಿ ಪ್ರಧಾನ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್ ಸಮ್ಮುಖದಲ್ಲಿ ನಾಲ್ಕು ತಾಲೂಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಒಟ್ಟು 11297 ಪ್ರಕರಣಗಳಲ್ಲಿ ಅಪಘಾತ ವಿಮೆ, ನೀರಿನ ಬಿಲ್, ಬ್ಯಾಂಕ ಸಾಲ ವಸೂಲಿ, ಮನೆ ಕರ, ಕೌಟಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್, ಜನನ ಮರಣ, ಮತ್ತು ಕ್ರಿಮಿನಲ್ ಪ್ರಕರಣಗಳನ್ನೊಳಗೊಂಡಂತೆ ಒಟ್ಟು 2510 ಪ್ರಕಣಗಳ ರಾಜೀ ಸಂದಾನದಲ್ಲಿ 2223 ಪ್ರಕರಣಗಳನ್ನು ಇತ್ಯರ್ಥಪಡಿಸಿ, ರೂ. 7,66,04,735.00ಮೊತ್ತವನ್ನು ಸರಕಾರಕ್ಕೆ ಜಮಾ ಮಾಡಲಾಗಿದೆ.
ಈ ಕುರಿತು ಶನಿವಾರ ನಡೆದ ಅದಾಲತ್ ನಂತರ ನ್ಯಾಯಾಲಯದಿಂದ ಮಾಹಿತಿ ನೀಡಿದ್ದು, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 30 ಮೋಟಾರು ವಾಹನ ಮತ್ತು ಇತರೆ 70 ಪ್ರಕರಣ ಸೇರಿ ಒಟ್ಟು 100 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 20 ಮೋಟಾರು ವಾಹನ, 1 ವೈವಾಹಿಕ ಪ್ರಕರಣ, 7 ಬ್ಯಾಂಕ್ ಪ್ರಕರಣ, 19 ಚೆಕ್ ಬೌನ್ಸ್, 26 ಇನ್ನಿತರ ಪ್ರಕರಣಗಳು ಇತ್ಯರ್ಥಪಡಿಸಿದೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ೨೦ ಚೆಕ್ ಬೌನ್ಸ್, 126 ಜನನ ಮರಣ ಮತ್ತು ಕ್ರೀಮಿನಲ್ ಕೇಸಸ್ ಸೇರಿ 1122 ಪ್ರಕರಣಗಳು ಇತರ್ಥಪಡಿಸಲಾಗಿದೆ. ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 10 ಚೆಕ್ ಬೌನ್ಸ್, 114 ಕೌಟಂಬಿಕ ದೌರ್ಜನ್ಯ, 658 ಜನನ ಮರಣ ಮತ್ತು ಕ್ರಿಮಿನಲ್ ಪ್ರಕರಣಗಳು ಇತರ್ಥಪಡಿಸಿ ನಾಲ್ಕು ನ್ಯಾಯಾಲಯಗಳು ಸೇರು ಲೋಕ ಅದಾಲತನಲ್ಲಿ ಒಟ್ಟು 2223 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸದಸ್ಯರು ಸೇರಿ ಇನ್ನಿತರ ವಕೀಲರು ಇದ್ದರು.
