ಹೊಸಪೇಟೆ
ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಹಂಪಿ ಮತ್ತು ಆನೆಗೊಂದಿ ಭಾಗವು ಧಾರ್ಮಿಕ, ಐತಿಹಾಸಿಕ ಮತ್ತು ಪ್ರವಾಸಿ ತಾಣಗಳಿಂದ ವಿಶ್ವ ಪ್ರಶಿದ್ಧಿ ಹೊಂದಿವೆ. ಆದರೆ ಇಂತಹ ಐತಿಹಾಸಿಕ ತಾಣಗಳಲ್ಲಿ ಪ್ರವಾಸಿಗರ ವಸತಿಗಾಗಿ ಎಂಬ ಕುಂಟು ನೆಪದಿಂದ ಅಲ್ಲಿ ಅನಧಿಕೃತ ರೇಸಾರ್ಟ್ ಮತ್ತು ಹೋಂಸ್ಟೇಗಳು ತಲೆ ಎತ್ತಿವೆ. ಇಂತಹ ಅನಧಿಕೃತ ರೇಸಾರ್ಟ್‌ಗಳಿಂದ ಆ ಭಾಗದಲ್ಲಿ ಡ್ರಗ್, ಗಾಂಜಾ ಮುಂತಾದ ಅಕ್ರಮ ಚಟುವಟಿಕೆಗಳು ಜೋರಾಗುತ್ತಿವೆ. ಇದಕ್ಕೆ ಅಲ್ಲಿನ ಕೆಲ ರಾಜಕಾರಣಿಗಳು ಮತ್ತು ಪ್ರಭಾವಿಗಳ ಕುಮ್ಮಕ್ಕು ಇದೆ ಎಂದು ಮುಖ್ಯಮಂತ್ರಿಗಳು ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ ಮತ್ತು ಇತ್ತಿಚಿಗೆ ಸಾಣಾಪುರದಲ್ಲಿ ನಡೆದ ವಿದೇಶಿಗರ ಮೇಲೆ ಹಲ್ಲೆ ಮತ್ತು ಅತ್ಯಾಚಾರದ ಪ್ರಕರಣಕ್ಕೆ ಈಡೀ ರಾಜ್ಯವೆ ಹೊಣೆಯಾಗಬೇಕಾಗುತ್ತಿದೆ. ಹೀಗಾಗಿ ತಕ್ಷಣ ಹಂಪಿ, ಆನೆಗೊಂದಿ ಭಾಗದಲ್ಲಿನ ಅನಧಿಕೃತ ರೇಸಾರ್ಟ್ ಮತ್ತು ಹೋಂಸ್ಟೇಗಳನ್ನು ರದ್ದುಪಡಿಸಿ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು ಎಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಹಾಗೂ ಸರಕಾರಕ್ಕೂ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ಕಳೆದ ದಿನ ಹೊಸಪೇಟೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಆನೆಗೊಂದಿ ಭಾಗದಲ್ಲಿ ಡ್ರಗ್ ಮಾಫಿಯಾ ಇದೆ ಎಂದು ನಾನು ಎರಡು ವರ್ಷದ ಹಿಂದೆಯೇ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಆದರೆ ಗಂಗಾವತಿ ಶಾಸಕರು ಇದನ್ನು ಅಳ್ಳಗಳೆದಿದ್ದರು. ವರ್ಷದಲ್ಲಿ ಅನೇಕ ಭಾರಿ ಹಲ್ಲೆ, ಅತ್ಯಾಚಾರ, ಗಾಂಜಾ ಮಾರಾಟದಂತಹ ಅಕ್ರಮ ಚಟುವಟಿಕೆಗಳ ಪ್ರಕರಣಗಳು ದಾಖಲಾಗುತ್ತವೆ. ಆನೆಗೊಂದಿ ಭಾಗದಲ್ಲಿ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಬರವು ಭಕ್ತರು ಬೇರೆ. ಆದರೆ ಅಕ್ರಮ ಚಟುವಟಿಕೆ ನಡೆಸಲು ಬರುವ ವ್ಯಕ್ತಿಗಳ ಗುಂಪೆ ಬೇರೆ. ಇಂತಹವರಿಗೆ ಅಲ್ಲಿನ ಅನಧಿಕೃತ ರೇಸಾರ್ಟ್‌ಗಳ ಮತ್ತು ಹೋಂಸ್ಟೇಗಳು ದಾರಿ ಮಾಡಿ ಕೊಡುತ್ತವೆ. ಅನಧಿಕೃತ ರೇಸಾರ್ಟ್‌ಗಳಿಗೆ ಗಂಗಾವತಿಯ ರಾಜಕಾರಣಿಗಳು ಮತ್ತು ಕೆಲವು ಪ್ರಭಾವಿಗಳು, ಪೊಲೀಸರು ಹಾಗೂ ಅಧಿಕಾರಿಗಳು ಸಹ ಬೆಂಬಲವಾಗಿದ್ದಾರೆ. ಐತಿಹಾಸಿಕ ಧಾರ್ಮಿಕ ಕೇಂದ್ರಗಳಿರುವ ಆನೆಗೊಂದಿ, ಹಂಪಿ ಭಾಗದಲ್ಲಿ ಇಂತಹ ಅನೈತಿಕ ಚಟುವಟಿಕೆಗಳು ನಡೆಯದಂತೆ ನಿಗಾವಹಿಸುವುದು ಜಿಲ್ಲಾಡಳಿತದ ಜವಬ್ದಾರಿಯಾಗಿದೆ. ಸರಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ ಎಂದು ರಾಯರೆಡ್ಡಿ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!