ಗಂಗಾವತಿ.
ವಾಣಿಜ್ಯೋಧ್ಯಮಿ, ವೀರಶೈವ ಸಮಾಜ ಹಾಗೂ ಗಂಗಾವತಿಯ ಹಿರಿಯ ತಲೆಮಾರಿನ ಹಾಗೂ ಸರಳ, ಸಜ್ಜನ ರಾಜಕಾರಿಣಿ ರಾಜಶೇಖರಪ್ಪ ಗುಂಜಳ್ಳಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷದ ರಾಜಶೇಖರಪ್ಪ ಅವರು ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದು, ಸಂಜೆ ಅಂತ್ಯಕ್ರೀಯೆ ನೇರವೆರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಗುಂಜಳ್ಳಿ ಮನೆತನ ಹಿರಿಯರಾಗಿದ್ದ ಅವರು ರಾಮಕೃಷ್ಣ ಹೆಗಡೆಯವರ ನಿಕಟವರ್ತಿಯಾಗಿ ಜನತಾ ಪಕ್ಷದ ಮೂಲಕ ರಾಜಕಾರಣ ಮಾಡಿ ಗಂಗಾವತಿಯಲ್ಲಿ ಒಮ್ಮೆ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರ ಒಡನಾಡಿಯಾಗಿದ್ದ ರಾಜಶೇಖರಪ್ಪ ಅವರು ಟಿಎಪಿಸಿಎಂಸ್ ಗೆ ಮೂರು ಬಾರಿ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಅವರ ನಿಧನಕ್ಕೆ ಹಾಲಿ ಮಾಜಿ ಸಂಸದರು, ಶಾಸಕರು, ಗಣ್ಯರು ಮತ್ತು ವಿವಿಧ ಸಮಾಜದ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
