ಗಂಗಾವತಿ.
ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದ ಶ್ರೀ ಆಂಜನೇಯ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಿದ್ದು, ಕೇವಲ ೨೨ ದಿನಗಳಲ್ಲಿ ರೂ. ೨೭,೭೧,೭೬೧ ಹಣ ಭಕ್ತರಿಂದ ದೇಣಿಗೆ ರೂಪದಲ್ಲಿ ಸಮರ್ಪಣೆಯಾಗಿದೆ.
ಶುಕ್ರವಾರ ತಹಶೀಲ್ದಾರ ವಿಶ್ವನಾಥ ಮುರಡಿ ನೇತೃತ್ವದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಅಧಿಕಾರಿಗಳು, ಕಂದಾಯ ಶಿರಸ್ತೇದಾರರು, ಕಂದಾಯ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಸೇರಿ ಹುಂಡಿ ಹಣವನ್ನು ಎಣಿಕೆ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಡಿ. ೧೪ ರಿಂದ ರಿಂದ ಜ.೫ ೨೦೨೪ ರವರೆಗೆ ಒಟ್ಟು ೨೨ ದಿನಗಳ ಅವಧಿಯಲ್ಲಿ ಒಟ್ಟು ರೂ. ೨೭,೭೧,೭೬೧/- ರೂ ಗಳು ಸಂಗ್ರಹವಾಗಿದೆ. ಜೊತೆಗೆ ಎರಡು ವಿದೇಶಿ ನೋಟು (ನೇಪಾಳ) ಮತ್ತು ೩ ವಿದೇಶಿ ನಾಣ್ಯ ಹುಂಡಿಯಲ್ಲಿ ಸಂಗ್ರಹವಾಗಿರುತ್ತವೆ. ೨೨ ದಿನಗಳ ಅವಧಿಯಲ್ಲಿ ಹನುಮಮಾಲೆ ಕಾರ್ಯಕ್ರಮ ನಡೆದಿದ್ದು, ಸಾವಿರಾರು ಭಕ್ತರು ಆಗಮಿಸಿದ್ದರು. ಈ ಹಿಂದೆ ಡಿ.೧೪ ರಂದು ಹುಂಡಿ ಹಣ ಎಣಿಕೆ ಮಾಡಿದ ಸಂದರ್ಭದಲ್ಲಿ(೪೦ ದಿನಗಳ ಅವಧಿಯ) ರೂ.೨೦,೩೬,೪೬೫ ಹಣ ಸಂಗ್ರಹವಾಗಿತ್ತು. ಇಂದು ಎಣಿಕೆ ಮಾಡಿರುವುದು ಕೇವಲ ೨೨ ದಿನದಲ್ಲಿ ಸಂಗ್ರಹವಾಗಿರುವ ಹುಂಡಿಯಲ್ಲಿ ಭಕ್ತರು ಕಾಣಿಕೆ ನೀಡಿದ ಹಣ ಎಂದು ತಹಶೀಲ್ದಾರ ತಿಳಿಸಿದ್ದಾರೆ.
ಹುಂಡಿ ಹಣ ಎಣಿಕೆ ಮಾಡುವ ಸಂದರ್ಭದಲ್ಲಿ ಗ್ರೇಡ್-೨ ತಹಶೀಲ್ದಾರ ಮಹಾಂತಗೌಡ ಗೌಡರ ಶಿರಸ್ತೇದಾರಾದ
ಮೈಬೂಬಅಲಿ, ಕೃಷ್ಣವೇಣಿ, ನರ್ಮದಾ ಬಾಯಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ್, ಮಹೇಶ್ ದಲಾಲ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಅನ್ನಪೂರ್ಣ, ಮಹ್ಮದ್ ರಫೀಕ್, ಸುಧಾ, ಶ್ರಿರಾಮ ಜೋಷಿ, ಗಾಯತ್ರಿ, ಕವಿತಾ, ಹನುಮೇಶ ಪೂಜಾರ, ಮಂಜುನಾಥ ದಮ್ಮಾಡಿ, ಪಿಕೆಜಿಬಿ ಸಾಣಾಪುರ ಸಿಬ್ಬಂದಿ ಸುನಿಲ್, ರಾಜಶೇಖರ, ಪೊಲೀಸ್ ಸಿಬ್ಬಂದಿ ಪ್ರವಾಸಿ ಮಿತ್ರ ಸೇರಿ ಗಂಗಾವತಿ, ವೆಂಕಟಗಿರಿ, ಮರಳಿ ಗ್ರಾಮ ಆಡಳಿತ ಅಧಿಕಾರಿಗಳು, ದೇವಸ್ಥಾನ ಸಿಬ್ಬಂದಿ ವೆಂಕಟೇಶ ಮತ್ತಿತರು ಇದ್ದರು.