ಗಂಗಾವತಿ.
ಹೆಸರಾಂತ ಆಹಾರ ಪದಾರ್ಥ ಹೊಂದಿರುವ ಜಿಆರ್‌ಬಿ ಕಂಪನಿಯಿಂದ ಆಯೋಜಿಸಿದ್ದ ಅಡುಗೆ ಮನೆ ಕಾರ್ಯಕ್ರಮ ಯಶಸ್ವಿಯಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಹಲವು ಆಟಗಳನ್ನು ಆಡಿಸುವ ಮೂಲಕ ವಿವಿಧ ರೀತಿಯ ರುಚಿಕಟ್ಟಾದ ಖಾದ್ಯ, ತಿಂಡಿ ಮತ್ತಿತರ ಅಡುಗೆ ತಯಾರಿಸುವ ಕುರಿತು ಪ್ರಾತ್ಯಕ್ಷತೆ ಮೂಲಕ ಸಲಹೆ ನೀಡಲಾಯಿತು.
ಬುಧವಾರ ನಗರದ ಸುಶಮೀಂದ್ರತೀರ್ಥ ಗುರುಕುಲದಲ್ಲಿ ಮಹಿಳೆಯರಿಗಾಗಿ ಜಿಆರ್‌ಬಿ ಕಂಪನಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳನ್ನು ಕಂಪನಿಯ ಮಾರಾಟ ವ್ಯವಸ್ಥಾಪಕ ಸಂದೇಶ ದೀಪ ಬೆಳೆಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಜಿಆರ್‌ಬಿ ಕಂಪನಿಯಿಂದ ಜಾಮೂನು, ಇಡ್ಲಿ ರವೆ ಸೇರಿದಂತೆ ಹಲವು ಸಿಹಿ ಖಾದ್ಯ, ಪೊಳೆಯುಗರೆ, ಪಲಾವ್ ಮತ್ತಿತರ ಮಸಾಲೆ ಪದಾರ್ಥಗಳನ್ನು ಸಿದ್ಧಪಡಿಸಿ ಮಹಿಳೆಯರು ನೇರವಾಗಿ ಉಪಯೋಗಿಸುವಂತೆ ಮಾರುಕಟ್ಟೆಗೆ ಒದಗಿಸುತ್ತದೆ. ಪ್ರತಿ ಮನೆಯಲ್ಲೂ ಜಿಆರ್‌ಬಿಯ ಆಹಾರ ಪದಾರ್ಥ ಇಂದು ದಾಪುಗಾಲು ಇಟ್ಟಿದೆ. ಇಂತಹ ಪದಾರ್ಥ ಉಪಯೋಗಿಸಿ ರುಚಿಕಟ್ಟಾದ ಅಡುಗೆ ಸಿದ್ಧಪಡಿಸುವ ಕುರಿತು ಕಂಪನಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಮನೆಯಲ್ಲಿ ರುಚಿಕಟ್ಟಾದ ಅಡುಗೆ ತಯಾರಿಸಿದರೆ ಮನೆಯ ಎಲ್ಲಾ ಸದಸ್ಯರು ಸಂತೃಪ್ತರಾಗಿರುತ್ತಾರೆ. ಆದರೆ ಮಹಿಳೆಯರು ಕೇವಲ ಅಡುಗೆ ಮನೆಗೆ ಸಿಮೀತವಾಗದೇ ಇಂದು ವಿವಿಧ ಸಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ ಇಂದು ಮಹಿಳೆಯರಿಗೆ ವಿಶೇಷ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲಾಗಿದೆ ಎಂದರು.
ಅಡುಗೆ ಮನೆ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ವಿವಿಧ ರೀತಿಯ ಆಟಗಳನ್ನು ಆಡಿ ಸಂಭ್ರಮಾಚರಿಸಿದರು. ಮತ್ತು ಜಿಆರ್‌ಬಿಯಿಂದ ತಯಾರಿಸಿದ್ದ ರುಚಿಕಟ್ಟಾದ ಅಡುಗೆ ಸವಿದು ಸಂತೃಪ್ತರಾದರಲ್ಲದೇ ಜಿಆರ್‌ಬಿ ಕಂಪನಿಯ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಆರ್‌ಬಿ ಕಂಪನಿಯ ಮಾರುಕಟ್ಟೆ ನಿರ್ವಾಹಕ ಕೆ.ಎಂ.ಜಡೇಶ್ ವಂದಿಸಿದರು. ಕಂಪನಿಯಿಂದ ಆಗಮಿಸಿದ್ದ ಅಡುಗೆ ಭಟ್ಟರಾದ ಸದಾನಂದ ತುಂಗಾ ಮತ್ತು ಎಸ್.ಉಡುಪಾ ಮಹಿಳೆಯರು ರವಾ ಇಡ್ಲಿ, ಜಾಮೂನು, ಪೊಳೆಯುಗರೆ ಮತ್ತಿತರ ಆಹಾರ ಪದಾರ್ಥಗಳನ್ನು ಯಾವ ರೀತಿ ತಯಾರಿಸಬೇಕು ಎಂಬುದನ್ನು ಪ್ರಾತ್ಯಕ್ಷತೆಯ ಮೂಲಕ ತೊರಿಸಿಕೊಟ್ಟರು. ಕಂಪನಿ ಸಹಯೋದ್ಯಗಿಗಳು ಇದ್ದರು.