ಗಂಗಾವತಿ.
ಕಾಂಗ್ರೆಸ್ ಎನ್‌ಎಸ್‌ಯುಐ ಸಮಿತಿ ಕಾರಟಗಿ ಬ್ಲಾಕ್ ಅಧ್ಯಕ್ಷ ಹಾಗೂ ಕಲ್ಯಾಣ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷ, ಪಿಎಲ್‌ಡಿ ಬ್ಯಾಂಕ್ ನಿದೇರ್ಶಕ ಕೆ.ಲಿಂಗೇಶ ನಾಯಕ ಚಳ್ಳೂರು ಅವರ ಹುಟ್ಟುಹಬ್ಬವನ್ನು ಗೆಳೆಯರು ಸಂಭ್ರಮದಿಂದ ಆಚರಿಸಿದ್ದು, ಗಂಗಾವತಿ ಸರಕಾರಿ ಉಪ ವಿಭಾಗ ಆಸ್ಪತ್ರೆ ಮತ್ತು ಮಹಿಳಾ ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಹಾಲು, ಬ್ರೇಡ್, ಹಣ್ಣು ಮತ್ತು ಬೇಬಿ ಕಿಟ್ ವಿತರಣೆ ಮಾಡಿ ವಿಶೇಷ ಸೇವೆ ಸಲ್ಲಿಸಿದರು.
ಗುರುವಾರ ಕೆ.ಲಿಂಗೇಶ ನಾಯಕ ಅವರೊಂದಿಗೆ ಆಗಮಿಸಿದ ಅವರ ಸ್ನೇಹಿತರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹುಟ್ಟುಹಬ್ಬದ ಶುಭಾಷಯ ಕೊರಿ ನಂತರ ನಗರದ ಆನೆಗೊಂದಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಗೆ ತೆರಳಿ ಬೇಬಿ ಕಿಟ್ ವಿತರಣೆ ಮಾಡಿ, ಹಾಲು, ಬ್ರೇಡ್, ಹಣ್ಣು ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ಮಾಸ್ಕ್‌ಗಳನ್ನು ವಿತರಣೆ ಮಾಡಿದರು. ನಂತರ ಸ್ನೇಹಿತರು ಮಾತನಾಡಿ, ಲಿಂಗೇಶ ನಾಯಕ ಚಳ್ಳೂರು ಅವರು ಮುಂದಿನ ದಿನದಲ್ಲಿ ರಾಜಕೀಯವಾಗಿ ಉತ್ತುಂಗಕ್ಕೆರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬಸುವರಾಜ್, ರಮೇಶ, ವಿಜಯ, ದೇವರಾಜ, ತಿಪ್ಪೇಶ, ಅಣ್ಣಯ್ಯ, ಮಂಜು, ಯಂಕೋಬ ಮುಕ್ಕುಂದ, ವಡಿಕೆಪ್ಪ, ಮುತ್ತು, ನಾಗರಾಜ, ಮುದುಕನಗೌಡ ಮತ್ತಿತರು ಇದ್ದರು.